

ಮಂಗಳೂರು: ಅಶೋಕನಗರದ ಎಸ್.ಸಿ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಡೆಂಘೆ ವಿಚಾರಗೋಷ್ಠಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಸಮುದಾಯ ಔಷದ ವಿಭಾಗದ ಹರಿಪ್ರಸಾದ್ ಮತ್ತು ಲೇಖನಾ ಅವರು ಡೆಂಘೆ ಹರಡುವ ವಿಧಾನ, ಲಕ್ಷಣಗಳು, ತಡೆಗಟ್ಟುವಿಕೆ, ಪರಿಹಾರ ಮಾರ್ಗದ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಾರಾಮ ರಾವ್ ಉಪಸ್ಥಿತರಿದ್ದರು. ಉಪನ್ಯಾಸಕಿ ನೂತನ ಪ್ರಸಾದ್ ಸ್ವಾಗತಿಸಿ ವಂದಿಸಿದರು.