ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಭಿಯಾನ

Dengue -
Published on

ಬೆಂಗಳೂರು: ಸಾಂಕ್ರಾಮಿಕ ರೋಗಗಳಾದ ಡೆಂಘೆ ಹಾಗೂ ಚಿಕೂನ್‌ಗುನ್ಯಾ  ನಿಯಂತ್ರಣಕ್ಕೆ ವಿಶೇಷ ಅಭಿಯಾನ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಈ ಅಭಿಯಾನಕ್ಕಾಗಿ 7.25 ಕೋಟಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದು, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಎಚ್ಚರಿಕೆ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಿದೆ.

ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪ್ರತಿ ಜಿಲ್ಲೆಗೆ ಒಬ್ಬರಂತೆ ಕೀಟ ಸಂಗ್ರಹಕಾರರನ್ನು ನೇಮಿಸಿಕೊಳ್ಳಬೇಕು. ರೋಗ ಹರಡುವ ವೈರಾಣುಗಳನ್ನು ಪತ್ತೆ ಮಾಡಲು ತಂತ್ರಜ್ಞಾನದ ಅಳವಡಿಕೆ, ಈಡಿಸ್ ಲಾರ್ವಾ ನಿರ್ಮೂಲನೆಗೆ ಸ್ವಯಂ ಸೇವಕರ ನಿಯೋಜನೆ, ಡೆಂಘೆ ಪರೀಕ್ಷೆಗೆ ಕಿಟ್‌ಗಳ ಖರೀದಿಸಲು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net