ತೀವ್ರಗೊಂಡ ಡೆಂಘೆ 293 ಹೊಸ ಪ್ರಕರಣಗಳು ಪತ್ತೆ

Dengue
Published on

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಬುಧವಾರ ಒಂದೇ ದಿನ 293 ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1,874 ಶಂಕಿತ ಡೆಂಘೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 118, ಮಂಡ್ಯ 30, ಧಾರವಾಡ ಮತ್ತು ಹಾವೇರಿ ತಲಾ 15, ಕೋಲಾರ 14, ಕೊಡಗು 12 ಹಾಗೂ ದಾವಣಗೆರೆ ಮತ್ತು ವಿಜಯನಗರ ತಲಾ 10 ಸೇರಿ ರಾಜ್ಯಾದ್ಯಂತ 293 ಪ್ರಕರಣಗಳು ವರದಿಯಾಗಿದೆ.

ಈ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ ಎರಡು ಮಕ್ಕಳು ಹಾಗೂ 1ರಿಂದ 18 ವರ್ಷದೊಳಗಿನ 101 ಮಂದಿ ಮತ್ತು 18 ವರ್ಷಗಳು ಮೇಲ್ಪಟ್ಟ 190 ಮಂದಿ ಡೆಂಘೆ ಪೀಡಿತರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಡೆಂಘೆ ಪ್ರಕರಣಗಳ ಸಂಖ್ಯೆ 7,840ಕ್ಕೆ ಏರಿಕೆಯಾಗಿದೆ. ಏಳು ಮಂದಿ ಮೃಪಟ್ಟಿದ್ದಾರೆ. ಡೆಂಘೆ ಸೋಂಕಿತರಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 358 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net