

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಹೊಸದಾಗಿ 286 ಡೆಂಘೆ ಪ್ರಕರಣ ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ ನಾಲ್ಕು ಮಕ್ಕಳು ಹಾಗೂ 1ರಿಂದ 18 ವರ್ಷದೊಳಗಿನ 50 ಮಂದಿ ಮತ್ತು 50 ವರ್ಷಗಳು ಮೇಲ್ಪಟ್ಟ 232 ಮಂದಿ ಡೆಂಘೆ ಪೀಡಿತರಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 1,502 ಡೆಂಘೆ ಶಂಕಿತರಿಗೆ ಪರೀಕ್ಷೆ ನಡೆಸಲಾಗಿದ್ದು, ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಡೆಂಘೆ ಪ್ರಕರಣಗಳ ಸಂಖ್ಯೆ6,676ಕ್ಕೆ ಏರಿಕೆಯಾಗಿದೆ.