ಪರಿಸರ ಸ್ವಚ್ಛವಾಗಿದ್ದರೆ ಡೆಂೆ ನಿಯಂತ್ರಣ

27 HANUR 4
Published on

ಹನೂರು: ಮನೆ ಹಾಗೂ ಸುತ್ತ್ತಲಿನ ವಾತಾವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜತೆಗೆ ಡೆಂಘೆ ಹರಡದಂತೆ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಒಡಿಪಿ ಸಂಸ್ಥೆ ತಾಲೂಕು ಸಂಯೋಜಕ ರಮೇಶ್ ತಿಳಿಸಿದರು.


ತಾಲೂಕು ಮಣಗಳ್ಳಿ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ, ಒಡಿಪಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯಿಂದ ಡೆಂಘೆ ವಿರೋಧಿ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಡೆೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.


ಡೆಂಘೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಸೊಳ್ಳೆಗಳು ಉತ್ಪತ್ತಿಯಾಗುವ ನೀರು ಸಂಗ್ರಹ ತೊಟ್ಟಿ, ಬಿಸಾಡಿದ ತೆಂಗಿನ ಚಿಪ್ಪು, ಒಡೆದ ಬಾಟಲಿಗಳು, ಪ್ಲಾಸ್ಟಿಕ್ ಲೋಟ ಹಾಗೂ ಟೈರ್‌ಗಳನ್ನು ತೆರವುಗೊಳಿಸಬೇಕು. ವಾರದಲ್ಲಿ ಒಂದು ದಿನ ಸಂಗ್ರಹಿಸಿರುವ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು.

ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು. ಸುತ್ತ್ತಲಿನ ವಾತಾವರಣ ನೈರ್ಮಲ್ಯವಾಗಿದ್ದರೆ ಡೆಂೆ ತಡೆಗಟ್ಟಬಹುದು ಎಂದು ತಿಳಿಸಿದರು.
ಬಳಿಕ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಗ್ರಾಪಂ ಸದಸ್ಯೆ ಲತಾ, ಕಾರ್ಯದರ್ಶಿ ಅಶ್ವಿನಿ, ಎಸ್‌ಡಿಎ ನಾಗರಾಜಮೂರ್ತಿ, ಬಿಲ್ ಕಲೆಕ್ಟರ್ ನಿಂಗಪ್ಪ, ಒಡಿಪಿ ಸಂಸ್ಥೆ ಸಂಚಾಲಕ ಮಹೇಶ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net