ವಿದ್ಯುತ್ ದೀಪಗಳ ಅಳವಡಿಕೆಗೆ ಮನವಿ

06-GPT- 3-
Published on

ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿರುವ ವಿದ್ಯುತ್ ದೀಪಗಳನ್ನು ದುರಸ್ತಿ ಮಾಡದ ಕಾರಣ ಅಪಫಾತಗಳು ಹೆಚ್ಚಾಗುತ್ತಿವೆ. ಕೂಡಲೇ ದೀಪಗಳನ್ನು ಬದಲಾಯಿಸಿ ಹೊಸ ವಿದ್ಯುತ್ ದೀಪಗಳ ಅಳವಡಿಕೆಗೆ ಕ್ರಮಕೈಗೊಳ್ಳುವಂತೆ ಕರ್ನಾಟಕ ಕಾವಲು ಪಡೆ ಪದಾಧಿಕಾರಿಗಳು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.


ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಶಾಸಕರನ್ನು ಭೇಟಿ ಮಾಡಿದ ಕರ್ನಾಟಕ ಕಾವಲು ಪಡೆಯ ತಾಲೂಕು ಅಧ್ಯಕ್ಷ ಎಂ.ಅಬ್ದುಲ್ ಮಾಲೀಕ್ ಮಾತನಾಡಿ, ಹೆದ್ದಾರಿಯಲ್ಲಿ ರಾತ್ರಿ ವೇಳೆ ಅಪಘಾತ ಸಂಭವಿಸುತ್ತಿದೆ. ಸೋಮವಾರ ರಾತ್ರಿ ನಡೆದ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೈಸೂರು-ಊಟಿ ರಸ್ತೆ, ಸುಲ್ತಾನ್ ಬತ್ತೇರಿ ರಸ್ತೆ ಹಾಗೂ ಚಾಮರಾಜನಗರ ರಸ್ತೆಯ ಮಧ್ಯೆ ಭಾಗದಲ್ಲಿರುವ ವಿದ್ಯುತ್ ದೀಪಗಳನ್ನು ದುರಸ್ತಿ ಮಾಡಿಕೊಡಬೇಕು ಎಂದು ಕೋರಿದರು.


ಬಳಿಕ ಮಾತನಾಡಿದ ಶಾಸಕರು, ಆ.15ರೊಳಗೆ ಎಲ್ಲ ದೀಪಗಳನ್ನು ಬದಲಾಯಿಸುವಂತೆ ಪುರಸಭೆಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಸಂಘದ ಕಾರ್ಯದರ್ಶಿ ಎಸ್.ಮುಬಾರಕ್, ಟೌನ್ ಉಪಾಧ್ಯಕ್ಷ ಸಾದಿಕ್ ಪಾಷ, ಗೌರವಾಧ್ಯಕ್ಷ ಶಕೀಲ್, ಸಂಚಾಲಕ ರಾಜು, ರಾಮೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net