

ಕೂಡ್ಲಿಗಿ: ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರವೇ ತಾಲೂಕು ಪದಾಧಿಕಾರಿಗಳು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಕಾಟೇರ್ ಹಾಲೇಶ್ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನ ಅಂಗಡಿ, ಮಾಲ್‌ಗಳಲ್ಲಿ ಕನ್ನಡ ಫಲಕಗಳನ್ನು ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಬಂಧಿಸಿರುವ ವೇದಿಕೆಯ ಕಾರ್ಯಕರ್ತರನ್ನು ಕೂಡಲೆ ಬಿಡುಗಡೆ ಮಾಡಬೇಕು.
ಸರ್ಕಾರ ಮಾಡುವ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡುತ್ತಿದೆ. ಅದ್ದರಿಂದ ಎಲ್ಲೆಡೆ ಕನ್ನಡ ನಾಮ ಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಆರ್.ಎಂ. ಕಾಶಿನಾಥ, ಕೆ. ತಿಪ್ಪೇಸ್ವಾಮಿ, ಜಿ. ನಾಗರಾಜ, ಮಹಮದ್ ತೊಫೀಖ್, ಶರಣಪ್ಪ, ಶಿವಕುಮಾರ್, ಎಲೆ ನಾಗರಾಜ ಭಾಗಿಯಾಗಿದ್ದರು.