More

    ಕರವೇ ಕಾರ್ಯಕರ್ತರ ಉರುಳು ಸೇವೆ – ನಾರಾಯಣಗೌಡ ಬಿಡುಗಡೆಗೆ ಆಗ್ರಹ

    ದಾವಣಗೆರೆ: ಕರವೇ ಅಧ್ಯಕ್ಷ ನಾರಾಯಣಗೌಡ ಹಾಗೂ ಕಾರ್ಯಕರ್ತರ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗದಿಂದ ಉಪ ವಿಭಾಗಾಧಿಕಾರಿ ಕಚೇರಿಯವರೆಗೂ ಉರುಳುಸೇವೆ ನಡೆಸಿದರು.
    ಕನ್ನಡ ನಾಮಫಲಕ ಕಡ್ಡಾಯ ಅಭಿಯಾನ ನಡೆಸುತ್ತೇವೆಂದು ತಿಳಿಸಿದ್ದರೂ ಪೊಲೀಸರು ಮೆರವಣಿಗೆಗೆ ಅವಕಾಶ ನೀಡದ ಕಾರಣ ಕಾರ್ಯಕರ್ತರು ಆಕ್ರೋಶಗೊಂಡು ಕೆಲವು ಕಡೆ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿದು ತೆರವುಗೊಳಿದ್ದಾರೆ. ಆದರೆ ಸರ್ಕಾರ ನಾರಾಯಣಗೌಡ ಮತ್ತು 53 ಜನ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಕನ್ನಡಿಗರಿಗೆ ದ್ರೋಹ ಎಸಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
    ಕಾನೂನು ಪ್ರಕಾರ ಅಂಗಡಿ ಮುಂಗಟ್ಟು ಮೊದಲಾದ ನಾಮಫಲಕ, ಜಾಹೀರಾತು ಫಲಕಗಳು ಕನ್ನಡದಲ್ಲಿ ಶೇ.60ರಷ್ಟು ಇರಬೇಕೆಂದು ಸರ್ಕಾರ ಆದೇಶ ಮಾಡಿದ್ದರೂ ಸರಿಯಾದ ಕ್ರಮ ಕೈಗೊಳ್ಳದೆ ಇರುವುದರಿಂದ ಕರವೇ ಇದನ್ನು ಮಾಡಿದೆ. ಸರ್ಕಾರ ಎಚ್ಚೆತ್ತು ಅಂತಹ ನಾಮಫಲಕಗಳಿಗೆ ನೋಟಿಸ್ ನೀಡಿ ಮಸಿ ಬಳಿಯುವ ಕೆಲಸ ಮಾಡಬೇಕಿದೆ ಎಂದರು.
    ಬಂಧಿತ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಗೊಳಿಸಬೇಕು. ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಕಾವಲು ಸಮಿತಿಯನ್ನು ವಿಸರ್ಜಿಸಬೇಕೆಂದು ಒತ್ತಾಯಿಸಿದರು.
    ಎಂ.ಎಸ್.ರಾಮೇಗೌಡ ನೇತೃತ್ವದಲ್ಲಿ ಯುವ ಘಟಕ ಅಧ್ಯಕ್ಷ ಗೋಪಾಲ್ ದೇವರಮನೆ, ಜಿಲ್ಲಾ ಸಂಚಾಲಕ ಖಾದರ್ ಬಾಷಾ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಕುಮಾರ್, ತನ್ವೀರ್ ಹಾಗೂ ತಮನ್ನ ರಫೀಕ್ ಉರುಳು ಸೇವೆ ನಡೆಸಿದರು.

    ಉಪಾಧ್ಯಕ್ಷೆ ಮಂಜುಶ್ರೀ ಗೌಡ, ಜಿ.ಎಸ್.ಸಂತೋಷ್. ಕೆ ಜಿ ಬಸವರಾಜ್, ಮಲ್ಲಿಕಾರ್ಜುನ್, ಎಂಡಿ ರಫೀಕ್, ನಾಗರಾಜ್ ಮೆಹರ್‌ವಾಡೆ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಬಸಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts