ಪಟ್ಟಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಆಗ್ರಹ

21blh2 dysp news
Published on

ಬೈಲಹೊಂಗಲ: ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಉಪ ವಿಭಾಗಮಟ್ಟದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಅಧ್ಯತೆಯಲ್ಲಿ ಈಚೆಗೆ ಜರುಗಿತು.

ದಲಿತ ಮುಖಂಡರಾದ ಸಂಜು ಮುರಗೋಡ, ರಮೇಶ ಹುಲ್ಲೆಣ್ಣವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಮನವಿ ಮಾಡಿದರು.

ತಾಲೂಕಿನ ಸಿದ್ದ ಸಮುದ್ರ ಗ್ರಾಮದಲ್ಲಿ ದಲಿತರು ತೀರಿಹೋದ ಸಂದರ್ಭದಲ್ಲಿ ವಿವಿಧ ಗ್ರಾಮಗಳ ದಲಿತರು ಬರುತ್ತಾರೆ ಎಂದು ಚಹಾ ಅಂಗಡಿ ಬಂದ್​ ಮಾಡುತ್ತಾರೆ. ಹೀಗಾಗಿ, ಪ್ರತಿ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಬೇಕು. ಜತೆಗೆ ಜಾತಿ ವ್ಯವಸ್ಥೆ ನಿಮೂರ್ಲನೆ ಮಾಡಲು ಪೊಲೀಸ್​ ಇಲಾಖೆ ಮುಂದಾಗಬೇಕು ಎಂದರು.

ಪ್ರಕಾಶ ಮಾದಿಗರ, ರುದ್ರಪ್ಪ ಮುಂದಿನಮನಿ, ರಮೇಶ ರಾಯಪ್ಪಗೋಳ ಮಾತನಾಡಿದರು. ಉಪವಿಭಾಗದ ಡಿಎಸ್​ಎಸ್​ ಹಾಗೂ ವಿವಿಧ ಸಂಟನೆಗಳ ಮುಖಂಡರ ಕುಂದು&ಕೊರತೆ ಆಲಿಸಿದ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು. ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಪಿಐ ಗಳಾದ ಪ್ರಮೋದ ಯಲಿಗಾರ, ಶಿವಾನಂದ ಗುಡಗನಟ್ಟಿ, ಗಜಾನನ ನಾಯ್ಕ, ಎಸ್​.ಸಿ ಪಾಟೀಲ, ಎಂ.ಬಿ.ಬಿರಾದಾರ, ಪಿಎಸ್​ ಐಗಳಾದ ಚನ್ನ್ನಬಸವ ಬಬಲಿ, ಗುರುರಾಜ ಕಲಬುರ್ಗಿ, ಸುಮಾ ಗೋರಬಾಳ, ಗಂಗಾಧರ ಹಡಪದ, ಪ್ರವಿಣ ಕೋಟಿ, ಎ್​.ವೈ. ಮಲ್ಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net