ಕೆಲಸಕ್ಕೆ ತಕ್ಕಂತೆ ವೇತನ ನೀಡಲು ಪಟ್ಟು

mgd
Published on

ಮಾಗಡಿ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ ತಾಲೂಕಿನ ಪರವಾನಗಿ ಭೂಮಾಪಕರ ಸಂ ಇತ್ತೀಚೆಗೆ ಡಿಡಿಎಲ್​ಆರ್​ ಹನುಮೇಗೌಡ ಅವರಿಗೆ ಮನವಿ ಸಲ್ಲಿಸಿತು.

ಸಂದ ಅಧ್ಯಕ್ಷ ಮುರಳೀಧರ್​ ಮಾತನಾಡಿ, ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಕಡತ ತಯಾರಿಸುವುದಕ್ಕೆ ತಗಲುವ ವೆಚ್ಚ ಹಾಗೂ ಇತರ ಕೆಲಸಗಳಿಗೆ ಹೆಚ್ಚು ಖರ್ಚು ಬರುವುದಿಂದ ಪ್ರತಿ ಕಡತಕ್ಕೆ 1200 ರೂ. ನಂತೆ ತಿಂಗಳಿಗೆ ಕನಿಷ್ಠ 8 ಸಾವಿರದಿಂದ 20 ಸಾವಿರ ರೂ. ವೇತನ ಪಾವತಿಯಾಗುತ್ತದೆ.

ಸರ್ಕಾರಿ ಭೂ ಮಾಪಕರಂತೆಯೇ ನಾವು ಕೆಲಸ ಮಾಡುತ್ತದ್ದರೂ ವೇತನ ತಾರತಮ್ಯ ಮಾಡಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಪ್ರತಿ ಪರವಾನಗಿ ಭೂಮಾಪಕರಿಗೂ ಬಾಂದು ಸಹಾಯಕರನ್ನು ನೇಮಿಸಿಕೊಡಬೇಕು. ಸರ್ಕಾರದ ಸೇವಾ ಭದ್ರತೆ ಮತ್ತು ಇನ್ನಿತರ ಸೌಲತ್ತು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಕಾರ್ಯದರ್ಶಿ ನಟರಾಜು ಮಾತನಾಡಿ, ಕೆರೆಯ ಅಳತೆ ವೇತನ ಪಾವತಿ ಆಗಿಲ್ಲ, ಪೋಡಿಮುಕ್ತ ಅಭಿಯಾನದಡಿ ಕೆಲಸ ನಿರ್ವಹಿಸಿದ್ದು, 2 ವರ್ಷ ಕಳೆದರೂ ಸಂಭಾವನೆ ನೀಡಿಲ್ಲ. 2 ತಿಂಗಳಿಂದ ದರಖಾಸ್ತು ಪೋಡಿ ಆಂದೋಲನದಲ್ಲಿ ಅಳತೆ ಕಾರ್ಯ ಮಾಡಿದ್ದು, ಅದಕ್ಕೂ ವೇತನ ನೀಡಿಲ್ಲ ಎಂದು ದೂರಿದ ಅವರು, ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸಿ ನ್ಯಾಯ ಒದಗಿಸಿಕೊಡುವವರೆಗೂ ಕೆಲಸ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net