ಲೆಕ್ಕ ಪತ್ರ ಪರಿಶೀಲನೆ ನಡೆಸುವಂತೆ ಒತ್ತಾಯ

ಲೆಕ್ಕ ಪತ್ರ ಪರಿಶೀಲನೆ ನಡೆಸುವಂತೆ ಒತ್ತಾಯ
Published on

ಅರಸೀಕೆರೆ (ಗ್ರಾಮಾಂತರ): ಹದಿನೈದನೆ ಹಣಕಾಸು ಯೋಜನೆ ಅಡಿಯಲ್ಲಿ ಕೈಗೊಂಡಿರುವ ಕುಡಿಯುವ ನೀರು ವಿದ್ಯುತ್ ದೀಪ, ಮೋಟಾರ್ ದುರಸ್ತಿ, ಚರಂಡಿ ನಿರ್ಮಾಣ ಹಾಗೂ ಹಲವು ಪರಿಕರಗಳ ಖರೀದಿಯಲ್ಲಿ ಲೋಪವಿದ್ದು, ಲೆಕ್ಕಪತ್ರ ಪರಿಶೀಲನೆ ನಡೆಸಿ ತನಿಖೆ ಕೈಗೊಳ್ಳುವಂತೆ ಕೆಲ ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಾಣಾವರ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಈ ಪ್ರಸಂಗ ನಡೆಯಿತು.

ಪಿಆರ್‌ಡಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ಕಾಮಗಾರಿಗಳ ಪೈಕಿ ಬಹುತೇಕ ಲೋಪವಿದ್ದು ಸದರಿ ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಬರುವವರೆಗೂ ಯಾವುದೇ ಕಾರಣಕ್ಕೂ ಪಿಆರ್‌ಡಿ ಇಲಾಖೆಯ ಲೆಕ್ಕವನ್ನು ಸಭೆಯಲ್ಲಿ ಮಂಡಿಸದಂತೆ ಆಕ್ರೋಶ ವ್ಯಕ್ತಪಡಿಸಲಾಯಿತು.

ಮಂಜುನಾಥನ ಕೊಪ್ಪಲು ಹಾಗೂ ಉಪ್ಪನಹಳ್ಳಿ ಗ್ರಾಮಗಳು ಬಾಣಾವರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವುದಿಲ್ಲ. ಅಲ್ಲಿನ ಲೆಕ್ಕ ಪತ್ರವನ್ನು ಇಲ್ಲಿ ಮಂಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಲಾಯಿತು.

ಗ್ರಾ.ಪಂ. ಅಧ್ಯಕ್ಷರಾದ ವೀಣಾ ವಿಶ್ವನಾಥ್, ಸಾಮಾಜಿಕ ಲೆಕ್ಕ ಪರಿಶೋಧನಾ ಇಲಾಖೆಯ ಶಿವಪ್ರಸಾದ್, ತಾಲೂಕು ಯೋಜನಾಧಿಕಾರಿ ವೇಣುಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್, ಬಿಎನ್ ಧರ್ಮಣ್ಣ, ಸೈಯದ್ ಆಸಿಫ್, ಸಂಜಯ್, ಸರಸ್ವತಿ, ಶ್ರೀನಿವಾಸ್, ಭಾಗ್ಯಮ್ಮ, ಆಶಾ, ಹರೀಶ್, ಮಲ್ಲಿಕಾರ್ಜುನ್, ಗ್ರಾಮದ ಪ್ರಮುಖರಾದ ಪ್ಯಾರೂ ಸಾಹೇಬ್, ಕೋಟಪ್ಪ, ಈಶ್ವರಪ್ಪ, ರೈತ ಸಂಘದ ಅಧ್ಯಕ್ಷ ಬಿ.ಎನ್. ಬೀರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net