

ಖಾನಾಪುರ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಅನುಕೂಲತೆಗಾಗಿ ಕನಿಷ್ಠ 12 ಗಂಟೆ ತ್ರೀೆಸ್ ವಿದ್ಯುತ್ ಪೂರೈಸಬೇಕು ಎಂದು ನೇಗಿಲ ಯೋಗಿ ರೈತ ಸಂದ ತಾಲೂಕಾಧ್ಯ ರವಿ ಪಾಟೀಲ ಆಗ್ರಹಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಬೆಕವಾಡ, ಜುಜವಾಡ, ಖೆರ್ವಾಡ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಿಸಬೇಕು. ಅಲ್ಲದೆ, ರೈತರು ಕೃಷಿ ಎಸ್ಟೇಟ್ಗಳ ಪ್ರದೇಶಗಳಲ್ಲಿ ವಾಸಿಸುತ್ತಾರೆ. ರಾತ್ರಿ ಬೆಳೆಗಳಿಗೆ ನೀರುಣಿಸುವ ವೇಳೆ ರೈತರಿಗೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಿರುತ್ತದೆ. ಹೀಗಾಗಿ, ಸಂಜೆ 6ರಿಂದ ಬೆಳಗ್ಗೆ ವರೆಗೆ ಏಕ&ಹಂತದ ವಿದ್ಯುತ್ ಸರಬರಾಜು ಮುಂದುವರಿಸಬೇಕು ಎಂದು
ಮನವಿ ಮಾಡಿದರು.
ತಹಸೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ, ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಸೂಚಿಸಿದರು. ಭರಮಾನಿ ಪಾಟೀಲ, ಬೆಕ್ವಾಡ, ಜುಂಜವಾಡ ಹಾಗೂ ಕತ್ಗಲಿ ರೈತರು ಪಾಲ್ಗೊಂಡಿದ್ದರು.