ಹರಿಪ್ರಸಾದ ವಿರುದ್ಧ ಕ್ರಮಕ್ಕೆ ಆಗ್ರಹ

bkt-25-2
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ, ಬ್ರಾಹ್ಮಣ ತರುಣ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
Published on

ಬಾಗಲಕೋಟೆ: ಪೇಜಾವರ ಶ್ರೀಗಳ ವಿರುದ್ಧ ವಿ.ಪ ಸದಸ್ಯ ಬಿ.ಕೆ.ಹರಿಪ್ರಸಾದ ನೀಡಿರುವ ಹೇಳಿಕೆ ಖಂಡಿಸಿ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ, ಬ್ರಾಹ್ಮಣ ತರುಣ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಾಜದ ಮುಖಂಡರು ಬಿ.ಕೆ.ಹರಿಪ್ರಸಾದ ವಿರುದ್ಧ ಘೋಷಣೆ ಕೂಗಿದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ಯಾಳಕರ ಮೂಲಕ ಮನವಿ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ನರಸಿಂಹ ಆಲೂರ ಮಾತನಾಡಿ, ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ನಾಡು, ನುಡಿ, ಸಮಾಜ, ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೇಶ ಅಷ್ಟೆ ಅಲ್ಲದೇ ವಿಶ್ವವೇ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಬಿ.ಕೆ.ಹರಿಪ್ರಸಾದ ಅವರು ಶ್ರೀಗಳ ಬಗ್ಗೆ ನೀಡಿರುವ ಹೇಳಿಕೆ ನೋವು ಉಂಟು ಮಾಡಿದೆ. ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಾಸೂರಕರ ಮಾತನಾಡಿ, ಬಿ.ಕೆ.ಹರಿಪ್ರಸಾದ ತಮ್ಮ ಹೇಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪೇಜಾವರ ಶ್ರೀಗಳು ರಾಷ್ಟ್ರ, ರಾಜ್ಯಕ್ಕೆ ತಮ್ಮ ಮಾರ್ಗದರ್ಶನ ಮಾಡಿದ್ದಾರೆ. ತಮ್ಮ ರಾಜಕೀಯ ತೇವಲಿಗೆ ಇಲ್ಲದ ಸಲ್ಲದ ಹೇಳಿಕೆ ನೀಡುವುದು ಸಹಿಸಲು ಸಾಧ್ಯವಾಗಿಲ್ಲ. ರಾಜ್ಯಪಾಲರು ಹಾಗೂ ಸಿಎಂ ವಿ.ಪ ಸದಸ್ಯ ಬಿ.ಕೆ.ಹರಿಪ್ರಸಾದ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಬ್ರಾಹ್ಮಣರ ಸಂಖ್ಯೆ ಕಡಿಮೆ ಅನ್ನೋ ಮನೋಭಾವದಲ್ಲಿ ಸಮಾಜದ ಕುರಿತಾಗಿ ಲಘುವಾಗಿ ಮಾತನಾಡುವುದು ತರವಲ್ಲ. ಸಮಾಜ ಪರಿವರ್ತನೆಯ ತಾಕತ್ತು ನಮಗಿದೆ. ಸೂಕ್ತ ಸಂದರ್ಭದಲ್ಲಿ ಉತ್ತರ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಮಾತನಾಡಿ, ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ಪೇಜಾವರ ಮಠದ ಹಿರಿಯ ಶ್ರೀಗಳು ನೇತೃತ್ವ ವಹಿಸಿದ್ದರೆ, ಮೂರ್ತಿ ಪ್ರತಿಷ್ಠಾಪನೆಯನ್ನು ಈಗನ ವಿಶ್ವಪ್ರಸನ್ನತೀರ್ಥರು ನೆರವೇರಿಸಿದ್ದರು. ಶ್ರೀಮಠಕ್ಕೆ ಭವ್ಯ ಪರಂಪರೆಯಿದ್ದು, ಅವರ ಕುರಿತಾಗಿ ಮಾತನಾಡುವಾಗ ಎಚ್ಚರವಹಿಸಬೇಕು. ಬ್ರಾಹ್ಮಣ ಸಮಾಜದ ತ್ರಿಮತಸ್ಥ ಶ್ರೀಗಳು ಹಾಗೂ ಮುಖಂಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಇನ್ನು ಸಮಾಜ ಸಹಿಸುವುದಿಲ್ಲ.

ಮುಖಂಡರಾದ ನಾರಾಯಣ ದೇಸಾಯಿ, ಪಿ.ಆರ್.ಜೋಶಿ, ಎಸ್.ಕೆ.ಕುಲಕರ್ಣಿ, ರಘೋತ್ತಮಾಚಾರ್ಯ ನಾಗಸಂಪಗಿ, ಭೀಮಸೇನ ಆಚಾರ್ಯ ಪಾಂಡುರಂಗಿ, ನಾರಾಯಣ ತಾಸಗಾಂವಿ, ಡಿ.ಬಿ.ಕುಲಕರ್ಣಿ, ಎಸ್.ವಿ.ಸತ್ಯನಾರಾಯಣ, ಪವನ ಸೀಮಿಕೇರಿ, ಎಸ್.ವಿ.ಶಾಮ್, ಪ್ರದೀಪ ಪರ್ವತಿಕರ, ಭಾಸ್ಕರ ಮನಗೂಳಿ, ಶುಭದಾ ದೇಶಪಾಂಡೆ, ವಿನಾಯಕ ದೇಸಾಯಿ, ಅನಂತ ಮಳಗಿ, ರಾಘವೇಂದ್ರ ರಾವ್, ಗಿರೀಶ ಉಡುಪಿ, ಕೇಶವ ಕುಲಕರ್ಣಿ, ಶ್ರೀಹರಿ ಡಂಬಳ, ನರಸಿಂಹ ಕಾಳಗಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net