ನಾರಾಯಣ ಮೊಗವೀರ ಮನೆಗೆ ನಿಯೋಗ ಭೇಟಿ

niyoga
Published on

ಗಂಗೊಳ್ಳಿ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭ ಜ.2ರಂದು ಸಂಜೆ ಬೋಟ್‌ನಿಂದ ಆಕಸ್ಮಿಕವಾಗಿ ಕಾಲುಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಗಂಗೊಳ್ಳಿ ಲೈಟ್‌ಹೌಸ್ ನಿವಾಸಿ ನಾರಾಯಣ ಮೊಗವೀರ ಅವರ ಮನೆಗೆ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ನೇತೃತ್ವದ ನಿಯೋಗ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿ 7 ದಿನ ಕಳೆದರೂ ಪತ್ತೆಯಾಗಿಲ್ಲ. ಪತ್ತೆಕಾರ್ಯ ಚುರುಕುಗೊಳಿಸುವಂತೆ ಮೀನುಗಾರರ ಮುಖಂಡ ಡಾ.ಜಿ.ಶಂಕರ್ ಮಾರ್ಗದರ್ಶನ ಪಡೆದು ಮೀನುಗಾರಿಕಾ ಇಲಾಖೆ, ಪೊಲೀಸ್ ಇಲಾಖೆ, ಜನಪ್ರತಿನಿಧಿಗಳಿಗೆ ಮೊಗವೀರ ಮಹಾಜನ ಸಂಘ ಈಗಾಗಲೇ ಮನವಿ ಮಾಡಿದೆ.

ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿ ಮಾಜಿ ಅಧ್ಯಕ್ಷ ಎಂ.ಎಂ.ಸುವರ್ಣ, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ ಅಧ್ಯಕ್ಷ ದಿನೇಶ ಕಾಂಚನ್, ಮಾಜಿ ಅಧ್ಯಕ್ಷ ರೋಹಿತಾಶ್ವ ಆರ್.ಕುಂದರ್, ಮಹೇಶ್ ನೆಂಪು, ಸುಕೇಶ್ ಮೊದಲಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net