ಮಾಶಾಸನ ಅರ್ಜಿ ನಿಯಮ ಸುಲಭಗೊಳಿಸಲು ಆಗ್ರಹ

gururaj gantiholi
ಶಾಸಕ ಗುರುರಾಜ್ ಗಂಟಿಹೊಳೆ
Published on

ಬೈಂದೂರು: ಹಿರಿಯ ಕಲಾವಿದರು ಹೊಸದಾಗಿ ಮಾಶಾಸನಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ಜಿಲ್ಲೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಕಚೇರಿಗೆ ತೆರಳಿ ಮಾಶಾಸನಕ್ಕೆ ಅರ್ಜಿ ಸಲ್ಲಿಸಬೇಕು. ಹಲವು ದಾಖಲೆ ಹಾಗೂ ದೃಢೀಕರಣ ನೀಡಬೇಕಾಗಿದ್ದು, ಈ ನಿಯಮ ಇನ್ನಷ್ಟು ಸುಲಭಗೊಳಿಸಬೇಕು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಹಿರಿಯ ಕಲಾವಿದರು ಕನಿಷ್ಠ ಮಾಸಿಕ ಪಿಂಚಣಿಗೆ ವರ್ಷಗಟ್ಟಲೆ ಕಾಯಬೇಕಾದ ದುಸ್ಥಿತಿ ಇದೆ. ತ್ವರಿತವಾಗಿ ಮಾಶಾಸನ ದೊರಕಲು ನಿಯಮಗಳಲ್ಲಿ ಅಗತ್ಯ ಬದಲಾವಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಸಕ್ತ ಇರುವ 2,000 ರೂ. ಮೊತ್ತವನ್ನು 3,000ಕ್ಕೆ ಏರಿಸಿ ಉಡುಪಿ ಜಿಲ್ಲೆಯ 71 ಮಂದಿ ಸೇರಿದಂತೆ ರಾಜ್ಯದ 13,108 ಹಿರಿಯ ಕಲಾವಿದರಿಗೆ ನೆಮ್ಮದಿಯ ಜೀವನ ಒದಗಿಸಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಆಶಾ ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸಿ

ಆಶಾ ಕಾರ್ಯಕರ್ತರು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಪೂರಕ ವಾತಾವರಣ ಕಲ್ಪಿಸಬೇಕು. ಅವರ ಬೇಡಿಕೆಯಂತೆ ಗೌರವಧನ ಪಾವತಿಗೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಈಗಾಗಲೇ ರಾಜ್ಯಾದ್ಯಂತ ಸಾವಿರಾರು ಆಶಾ ಕಾರ್ಯಕರ್ತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದ್ದಾರೆ. ಇದರಿಂದ ಆರೋಗ್ಯ ಸಂಬಂಧಿತ ಸೇವೆಗೆ ತೊಡಕಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಆಶಾ ಕಾರ್ಯಕರ್ತರ ಸಂಕಷ್ಟ ಆಲಿಸಬೇಕ ಎಂದು ಶಾಸಕ ಗಂಟಿಹೊಳೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net