ಕಾಮಗಾರಿ ವಿಳಂಭ ರೈಲು ಸಂಚಾರದಲ್ಲಿ ವ್ಯತ್ಯಯ

10-07-rama-Rail
Published on

ರಾಮನಗರ: ಹೆಜ್ಜಾಲ - ಕೆಂಗೇರಿ ನಡುವೆ ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ವಿಳಂಭವಾಗಿ ಬುಧವಾರ ಬೆಂಗಳೂರು-ಮೈಸೂರು ಮಾರ್ಗದ ಕೆಲವು ರೈಲುಗಳ ಸಂಚಾರಕ್ಕೆ ಅಡಚಣೆಯಾಗಿ ಪ್ರಯಾಣಿಕರು ಪರದಾಡಿದಂತಹ ಘಟನೆ ನಡೆಯಿತು.

ಹೆಜ್ಜಾಲ-ಕೆಂಗೇರಿ ಮಧ್ಯೆ ರೈಲ್ವೆ ಅಂಡರ್‌ಪಾಸ್ ಕಾಮಗಾರಿಯನ್ನು ಮಂಗಳವಾ ರಾತ್ರಿ 10 ಗಂಟೆಯಿಂದಲೇ ಆರಂಭಿಸಲಾಗಿತ್ತು. ಸಿಮೆಂಟ್ ಬ್ಲಾಕ್‌ಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ಬೆಳಿಗ್ಗೆ 7ರ ಹೊತ್ತಿಗೆ ಮುಗಿಯಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಕೆಲಸ ವಿಳಂಬವಾಯಿತು. ಹಾಗಾಗಿ, ರೈಲುಗಳ ಸಂಚಾರ ವಿಳಂಬವಾಗಿದೆ. ಇದರಿಂದಾಗಿ

ಬೆಳಿಗ್ಗೆ 7.30ರಿಂದ 9 ಗಂಟೆವರೆಗೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ರೈಲುಗಳು ಚನ್ನಪಟ್ಟಣ, ರಾಮನಗರ ಹಾಗೂ ಬಿಡದಿ ನಿಲ್ದಾಣದಲ್ಲೇ ನಿಂತಿದ್ದವು. ಇನ್ನೇನು ಕೆಲ ಹೊತ್ತಿನಲ್ಲೇ ರೈಲು ಹೊರಡಲಿದೆ ಎಂದು ಕೊಂಡ ಪ್ರಯಾಣಿಕರು ಗಂಟೆಗಳ ಕಾಲ ಕಾದು ಹೈರಾಣಾದರು. ನಿಗಧಿತ ಸಮಯಕ್ಕೆ ಕೆಲಸಗಳಿಗೆ ಹೋಗಬೇಕಿದ್ದರಿಂದ ರೈನಿನಿಂದಿಳಿದು ಬಸ್ ಸೇರಿದಂತೆ ಇತರ ವಾಹನಗಳನ್ನು ಏರಿ ಹೊರಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net