ಹಳೇ ಕಾಮಗಾರಿಗಳ ವಿಳಂಭ ಸಾಧ್ಯ

ಗಂಗಾವತಿ ನಗರಸಭೆ ಕಚೇರಿಗೆ ಡಿಸಿ ಡಾ.ಸುರೇಶ ಇಟ್ನಾಳ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಪೌರಾಯುಕ್ತ ಅರ್.ವಿರೂಪಾಕ್ಷಮೂರ್ತಿ, ಅಧ್ಯಕ್ಷೆ ಹೀರಾಬಾಯಿ ಸಿಂಗ್, ಪ್ರಭಾರ ತಹಸೀಲ್ದಾರ್ ರವಿ ಎಸ್.ಅಂಗಡಿ ಇತರರಿದ್ದರು.
ಗಂಗಾವತಿ ನಗರಸಭೆ ಕಚೇರಿಗೆ ಡಿಸಿ ಡಾ.ಸುರೇಶ ಇಟ್ನಾಳ್ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಪೌರಾಯುಕ್ತ ಅರ್.ವಿರೂಪಾಕ್ಷಮೂರ್ತಿ, ಅಧ್ಯಕ್ಷೆ ಹೀರಾಬಾಯಿ ಸಿಂಗ್, ಪ್ರಭಾರ ತಹಸೀಲ್ದಾರ್ ರವಿ ಎಸ್.ಅಂಗಡಿ ಇತರರಿದ್ದರು.
Published on

ಗಂಗಾವತಿ: ಕೆಐಆರ್‌ಡಿಎಲ್‌ನಲ್ಲಿ ತನಿಖೆ ಆರಂಭವಾಗಿದೆ. ಆದ್ದರಿಂದ ಹಳೇ ಕಾಮಗಾರಿ ವಿಳಂಭವಾಗುವ ಸಾಧ್ಯತೆ ಇದ್ದು, ಪ್ರಸಕ್ತ ವರ್ಷ ಆರಂಭಿಸಿದ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಡಿಸಿ ಡಾ.ಸುರೇಶ ಇಟ್ನಾಳ್ ಹೇಳಿದರು.

ನಗರಸಭೆ ಕಚೇರಿಗೆ ಬುಧವಾರ ಭೇಟಿ ನೀಡಿ ಮಾತನಾಡಿದರು. ಕೆಐಆರ್‌ಡಿಎಲ್ ಹಿಂದಿನ ಅಧಿಕಾರಿಗಳ ಮೇಲೆ ತನಿಖೆ ಆರಂಭವಾಗಿದ್ದು, ಹಳೇ ಕಾಮಗಾರಿಗಳನ್ನು ಆರಂಭಿಸುವುದಿಲ್ಲ. ಆದರೆ, ಪ್ರಸಕ್ತ ಸಾಲಿನಲ್ಲಿ ಆರಂಭಿಸಿದ ರಸ್ತೆ ದುರಸ್ತಿ, ಬೀದಿ ದೀಪ ನವೀಕರಣದ ಕಾಮಗಾರಿಗಳಿಗೆ ವೇಗ ನೀಡಲಾಗುವುದು. ಅನುದಾನದ ಕೊರತೆಯಿಂದ ವಿವಿಧ ಕಾಮಗಾರಿಗಳು ಆರಂಭಿಸಿಲ್ಲ. ರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ಸಿಎಂ ವಿಶೇಷ ಅನುದಾನದ ನಿರೀಕ್ಷೆಯಲ್ಲಿದ್ದು, ಬಿಡುಗಡೆಯಾದರೆ ಶಾಶ್ವತ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಗುರಿ ತಲುಪಿಲ್ಲ: ಮನೆಗಳ ದಾಖಲೆಗಳಿಗಾಗಿ ಸರ್ಕಾರ ಆರಂಭಿಸಿರುವ ಎ ಮತ್ತು ಬಿ ಖಾತೆ ಪ್ರಮಾಣದ ಗುರಿ ನಗರಸಭೆ ತಲುಪಿಲ್ಲ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರಸಭೆಯಲ್ಲಿ ಕೈಗೆತ್ತಿಕೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕಡತ ಪರಿಶೀಲಿಸಲಾಗಿದ್ದು, ವಿಳಂಬಕ್ಕೆ ಅವಕಾಶ ನೀಡದಂತೆ ತಿಳಿಸಲಾಗಿದೆ. ತೆರಿಗೆ ವಸೂಲಿ ನಿಧಾನಗತಿಯಲ್ಲಿದ್ದು, ನಿರೀಕ್ಷಿತ ತೆರಿಗೆ ವಸೂಲಾಗಿಲ್ಲ. ಸಿಬ್ಬಂದಿ ಕಾರ್ಯ ಪ್ರವೃತ್ತರಾಗಬೇಕು. ಆದಾಯ ಬಂದರೆ ಅಭಿವೃದ್ಧಿ ಸಾಧ್ಯ. ಮಾಹಿತಿ ಹಕ್ಕಿನಡಿ ಯಾರೇ ಅರ್ಜಿ ಸಲ್ಲಿಸಿದರೂ ಸಕಾಲಕ್ಕೆ ದಾಖಲೆ ನೀಡಿ, ಇಲ್ಲವೇ ಹಿಂಬಹರ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅರ್ಜಿದಾರರನ್ನು ಅಲೆದಾಡಿಸುವುದು ಸರಿಯಲ್ಲ ಎಂದು ಸೂಚಿಸಿದರು.

ಪರಿಶೀಲನೆ: ಕಚೇರಿಯ ಎಲ್ಲ ವಿಭಾಗಗಳನ್ನು ಪರಿಶೀಲಿಸಿ ನಗರಸಭೆಯಲ್ಲಿ ನಡೆಯುತ್ತಿರುವ ಲ್‌ಟಿ, ಪೇವರ್ಸ್‌ ಸೇರಿ ಇತರೆ ಕಾಮಗಾರಿಗಳನ್ನು ವೀಕ್ಷಿಸಿದರು. ನಗರಸಭೆ ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದ್ದು, ಶಾಶ್ವತ ಜಾಗ ನಿಗದಿಪಡಿಸಿ. ಇನ್ನೂ ಕನಕಗಿರಿ ರಸ್ತೆಯಲ್ಲಿದ್ದ ಡಿವೈಡರ್‌ಗಳ ಗ್ರಿಲ್ಸ್‌ಗಳನ್ನು ಮರುಬಳಕೆ ಮಾಡಬೇಕಿದ್ದು, ಉದ್ಯಾನಕ್ಕೆ ರಕ್ಷಣೆ ಗೋಡೆ ನಿರ್ಮಿಸಲು ಬಳಸಿ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಪ್ರಭಾರ ತಹಸೀಲ್ದಾರ್ ರವಿ ಎಸ್.ಅಂಗಡಿ, ಇಂಜಿನಿಯರ್‌ಗಳಾದ ಇಬ್ರಾಹಿಂ, ಆಸ್ಮಾ, ವ್ಯವಸ್ಥಾಪಕ ಷಣ್ಮುಖಪ್ಪ, ಕಂದಾಯ ನಿರೀಕ್ಷಕ ಮಹೇಶ ದಲಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net