ಜಿಂಕೆ ಬೇಟೆಗಾರನ ಬಂಧನ, ಇಬ್ಬರು ಪರಾರಿ

Arrest Kaidhi
Published on

ಶಿರಸಿ: ಜಿಂಕೆಯನ್ನು ಬೇಟೆ ಆಡಿ ಮಾಂಸಕ್ಕಾಗಿ ಅರ್ಧ ಸುಲಿದಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.

ಸೋಣಗಿ ಮನೆಯ ಗಣಪತಿ ಮಂಜುನಾಥ ಗೌಡ ಬಂಧಿತ. ಇನ್ನಿತರ ಆರೋಪಿತರಾದ ಉಂಚಳ್ಳಿಯ ವೆಂಕಟೇಶ ನಾಯ್ಕ, ಗಣೇಶ ನಾಯ್ಕ ತಲೆಮರೆಸಿಕೊಂಡಿದ್ದಾರೆ. ಡಿಎಫ್​ಒ ಡಾ. ಅಜ್ಜಯ್ಯ ಜೆ.ಆರ್. ಮಾರ್ಗದರ್ಶನದಲ್ಲಿ ಎಸಿಎಫ್ ಎಸ್.ಎಸ್. ನಿಂಗಾಣಿ, ಗಿರೀಶ ನಾಯ್ಕ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net