ಜಿಂಕೆ ಬಂದೈತೆ ನೋಡ್ಲಾ ಮಗಾ…

142
Published on

ಚನ್ನಗಿರಿ: ಆಹಾರ ಹುಡುಕಿಕೊಂಡು ನಾಡಿಗೆ ಬಂದ ಜಿಂಕೆಯನ್ನು ಸ್ಥಳೀಯರು ಹಿಡಿದು ಗುರುವಾರ ಅರಣ್ಯ ಇಲಾಖೆಗೆ ಒಪ್ಪಿಸಿದರು.

ಅರಣ್ಯದಿಂದ ತಾಲೂಕಿನ ಬೆಂಕಿಕೆರೆ ಗ್ರಾಮಕ್ಕೆ ಜಿಂಕೆ ಬಂದಾಗ ಶ್ವಾನಗಳು ಬೆನ್ನಟ್ಟಿ ಕಚ್ಚಿ ಗಾಯಗೊಳಿಸಿದವು. ತಕ್ಷಣ ಗ್ರಾಮಸ್ಥರು ಜಿಂಕೆಯನ್ನು ನಾಯಿಗಳಿಂದ ರಕ್ಷಿಸಿ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ ಜಿಂಕೆಯನ್ನು ವಾಹನದಲ್ಲಿ ಚನ್ನಗಿರಿ ಕಚೇರಿಗೆ ತಂದು ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿದರು.

ಈ ಸಂದರ್ಭದಲ್ಲಿ ಚನ್ನಗಿರಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ಮಾಹಿತಿ ನೀಡಿ, ಜಿಂಕೆಗೆ ಚಿಕಿತ್ಸೆ ಕೊಡಿಸಿದ್ದು ಗುಣಮುಖವಾದ ನಂತರ ಅರಣ್ಯಕ್ಕೆ ಬಿಡಲಾಗುವುದೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net