

ನುಗ್ಗೇಹಳ್ಳಿ: ಹೋಬಳಿಯ ಬಸವನಪುರ ಗ್ರಾಮದಲ್ಲಿ ಅಮಾವಾಸ್ಯೆ ಕಟ್ಟಳೆ ಪ್ರಯುಕ್ತ ಶಬರಿಮಲೆ ಅಯ್ಯಪ್ಪನ ಏಕರೂಪದ 18 ಮೆಟ್ಟಿಲುಗಳ ದೀಪಾರಾಧನೆ ಪೂಜಾ ಮಹೋತ್ಸವ ಕೇರಳದ ಶಬರಿಮಲೆ ಅರ್ಚಕರಾದ ಉನ್ನಿಕೃಷ್ಣನ್, ಆನಂದ್ ನಂಬೂದರಿ ನೇತೃತ್ವದಲ್ಲಿ ಜರುಗಿದವು.
ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಬೋರೇಗೌಡ, ಉದ್ಯಮಿ ಜಗದೀಶ್, ವಿನಯ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಪ್ರಕಾಶ್, ರಾಮಸ್ವಾಮಿ, ಮುಖಂಡರಾದ ಬೋರೇಗೌಡ, ಮಿಥುನ್, ಸಂತೋಷ್ ಇತರರಿದ್ದರು.