

ಬ್ರಹ್ಮಾವರ: ಭರತನಾಟ್ಯ ಕಲಾವಿದರು ಭಾರತದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ವಿಶ್ವ ಮಟ್ಟದಲ್ಲಿ ಅದ್ಭುತ ಸಾಧನೆ ಮತ್ತು ದಾಖಲೆ ಮಾಡಿದ ಬಿಲ್ಲವ ಸಮಾಜದ ಕುವರಿ ಒಬ್ಬಳು ಅಸಾಧ್ಯವಾದುದನ್ನು ಸಾಧ್ಯ ಎಂದು ಮಾಡಿದವರು ಬ್ರಹ್ಮಾವರದ ದೀಕ್ಷಾ ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ನಿರಂತರ 216 ಗಂಟೆಗಳಕಾಲ ಭರತನಾಟ್ಯ ಕಲೆಯನ್ನು ಪ್ರದರ್ಶನ ಮಾಡಿ ವಿಶ್ವದಾಖಲೆ ಮಾಡಿದ ಬ್ರಹ್ಮಾವರ ಸಮೀಪ ಆರೂರು ಮೇಲಡ್ಪು ವಿಠಲ್ ಪೂಜಾರಿ ಮತ್ತು ಶುಭ ದಂಪತಿ ಪುತ್ರಿ ಭರತನಾಟ್ಯ ವಿಧುಷಿ ದೀಕ್ಷಾ ವಿ.ಅವರನ್ನು ಸೋಮವಾರ ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಕರ್ನಾಟಕ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಸಮಿತಿಯ ನಾನಾ ಪದಾಧಿಕಾರಿಗಳಾದ ಅಚ್ಯುತ ಅಮೀನ ಕಲ್ಮಾಡಿ, ಹೊದೋಳ ಶಿವು, ಮುಡುಬ ರಾಘವೇಂದ್ರ, ಸಂದೀಪ್ ಪಂಪ್‌ವೆಲ್, ರಾಜು ಪೂಜಾರಿ ಉಪ್ಪೂರು, ಜಗನ್ನಾಥ ಕೋಟೆ, ಪ್ರದೀಪ್ ಸನೀಲ್ ಉಡುಪಿ, ಕರುಣಾಕರ ಪೂಜಾರಿ, ಅಶೋಕ್ ಪೂಜಾರಿ ಬ್ರಹ್ಮಾವರ, ಶಶಿಧರ ಅಮೀನ್ ಉಡುಪಿ ಮತ್ತು ನಾನಾ ಜಿಲ್ಲಾ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.