ನಂದಿಪುರ ಕೆರೆಗೆ ಬಾಗಿನ ಸಮರ್ಪಣೆ

17ss1ex minister madhuswami bagana samarpane
Published on

ಶನಿವಾರಸಂತೆ: ತಲಕಾವೇರಿ ತೀರ್ಥೋದ್ಭವ ಪ್ರಯುಕ್ತ ಕೊಡ್ಲಿಪೇಟೆ ಬಳಿಯ ನಂದಿಪುರ ಗ್ರಾಮದಲ್ಲಿರುವ ನಂದಿನೇಸರ ಉದ್ಯಾನವನದಲ್ಲಿ ಶುಕ್ರವಾರ ಗಂಗಾ ಆರತಿ ಹಾಗೂ ಬಾಗಿನ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೊಡ್ಲಿಪೇಟೆ ಗಣಪತಿ ದೇವಸ್ಥಾನದಿಂದ ಉದ್ಯಾನವನದ ವರೆಗೆ ಸುಮಂಗಲಿಯರಿಂದ ದೀಪ ಪ್ರಜ್ವಲನ, ಪೂರ್ಣಕುಂಬ ಮೆರವಣಿಗೆ ನಡೆಯಿತು. ತಲಕಾವೇರಿಯಲ್ಲಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತೀರ್ಥೋದ್ಭವಗೊಂಡ ಸಮಯದಲ್ಲೆ ನಂದಿನೇಸರ ಉದ್ಯಾನವನದ ನಂದಿಪುರ ಕೆರೆಗೆ ಸಾಂಪ್ರದಾಯಕ ಆರತಿ ಪೂಜೆ ಸಲ್ಲಿಸಿದ ನಂತರ ಗಂಗಾಮಾತೆ ಮತ್ತು ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಲಾಯಿತು.

ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮಾಜಿ ಸಚಿವ ಮಾಧುಸ್ವಾಮಿ ದಂಪತಿ ಮತ್ತು ಪ್ರಮುಖರು ನಂದಿಪುರ ಕೆರೆಗೆ ಬಾಗಿನ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಮತ್ತು ಹೈಕೋರ್ಟಿನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ, ಪ್ರಮುಖರಾದ ಡಾ.ಉದಯ್‌ಕುಮಾರ್, ಯತೀಶ್ ಕುಮಾರ್ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net