

ಶಿರ್ವ: ಮಜೂರು ಗ್ರಾಪಂ ವ್ಯಾಪ್ತಿಯ ಶಿರ್ವ ಪಾಲಮೆ ಕೂಡುರಸ್ತೆಯಲ್ಲಿ ನಿರ್ಮಿಸಿದ ಬಸ್ ತಂಗುದಾಣವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶನಿವಾರ ಉದ್ಘಾಟಿಸಿದರು. ತಂಗುದಾಣಕ್ಕೆ ಸ್ಥಳದಾನಗೈದ ಉಮೇಶ್ ಪ್ರಭು ಪಾಲಮೆ ಅವರನ್ನು ಸನ್ಮಾನಿಸಲಾಯಿತು.
ಮಜೂರು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಲದೂರು, ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಹೇರೂರು, ಸದಸ್ಯ ಮಧುಸೂದನ್, ಸಹನಾ ಶೆಟ್ಟಿ, ಸಂದೀಪ್ ರಾವ್, ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್ ಪಾಟ್ಕರ್, ಸದಸ್ಯೆ ಜೆಸಿಂತಾ ಡಿಸೋಜ, ರೈತ ಮೋರ್ಚಾ ಅಧ್ಯಕ್ಷ ಕೃಷ್ಣ ರಾವ್, ನಿತ್ಯಾನಂದ ಆಚಾರ್ಯ, ಗಣಪತಿ ಪ್ರಭು ಪಾಲಮೆ, ನಿತ್ಯಾನಂದ ನಾಯಕ್, ಸತೀಶ್ ಶೆಟ್ಟಿ, ವಲದೂರು ನಾರಾಯಣ ಶೆಟ್ಟಿ, ವಸಂತ ಪೂಜಾರಿ, ರೊನಾಲ್ಡ್ ಡಿಸೋಜ, ಸಂತೋಷ್ ಶೆಟ್ಟಿ, ಅರುಣ್ ಶೆಟ್ಟಿ, ಗುತ್ತಿಗೆದಾರ ರಾಜೇಶ್ ನಾಯ್ಕ, ಸುಕೇಶ್ ಪೂಜಾರಿ ವಲದೂರು, ಶಿರ್ವ ಮತ್ತು ಪಾದೂರು ಗ್ರಾಮಸ್ಥರು ಉಪಸ್ಥಿತರಿದ್ದರು.