ಬ್ರಹ್ಮಾವರದಲ್ಲಿ ಸಿಸಿ ಕ್ಯಾಮರಾ ಲೋಕಾರ್ಪಣೆ

CC
Published on

ಕೊಕ್ಕರ್ಣೆ: ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್ ವತಿಯಿಂದ ಬ್ರಹ್ಮಾವರದ ಪ್ರಾದೇಶಿಕ ಕೃಷಿ ಕೇಂದ್ರ ಬಳಿ ಎಸ್.ಜಯರಾಮ್ ನಾಯಕ್ ನೇತೃತ್ವದಲ್ಲಿ ಅಳವಡಿಸಿದ ಹೈಮಾಸ್ಕ್ ಲೈಟ್ ಮತ್ತು ಸಿಸಿ ಕ್ಯಾಮರಾವನ್ನು ಉಡುಪಿ ಲಯನ್ಸ್ ಡಿಸ್ಟ್ರಿಕ್ಟ್ 317ಸಿ ಗವರ್ನರ್ ಲಯನ್ ಮಹಮ್ಮದ್ ಹನೀಫ್ ಲೋಕಾರ್ಪಣೆ ಮಾಡಿದರು.

ಲಯನ್ಸ್ ಡಿಸ್ಟ್ರಿಕ್ಟ್ 317ಸಿಯ ರಾಜೀವ್ ಕೋಟ್ಯಾನ್, ಕ್ಯಾಬಿನೆಟ್ ಕೋಶಾಧಿಕಾರಿ ಶ್ರೀನಿವಾಸ ಪೈ., ಎಲ್‌ಸಿಐಎಫ್ ಕೋ ಆರ್ಡಿನೇಟರ್ ಹರಿಪ್ರಸಾದ ರೈ, ಬ್ರಹ್ಮಾವರ ಆರಕ್ಷಕ ಠಾಣಾಧಿಕಾರಿಗಳಾದ ಸುದರ್ಶನ ದೊಡ್ಡಮನಿಮತ್ತು ಮಹಂತೇಶ್ ಜಾಬ ಗೌಡ, ಕ್ಯಾಬಿನೆಟ್ ಸಹ ಕಾರ್ಯದರ್ಶಿ ಶೇಖರ್ ಶೆಟ್ಟಿ, ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ನಾಯಕ್, ಕಾರ್ಯದರ್ಶಿ ಐವಾನ್ ಡೋನಾತ್ ಸುವಾರಿಸ್, ಕೋಶಾಧಿಕಾರಿ ಯು.ಸಂತೋಷ್ ಕೋಟ್ಯಾನ್, ದಾನಿಗಳಾದ ದೇವದಾಸ್ ಶೆಟ್ಟಿ, ಬಿಜು ಜಿ.ನಾಯರ್, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಶೆಟ್ಟಿ, ಉಪಾಧ್ಯಕ್ಷೆ ಹೇಮಾ, ಸದಸ್ಯರಾದ ರೇವತಿ, ಆನಂದ ಮಟಪಾಡಿ, ಲಕ್ಷ್ಮೀ.ಎಸ್.ರಾವ್, ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net