ಮಸ್ಕಿ ದೇವಸ್ಥಾನದಲ್ಲಿ ತೊಟ್ಟಿಲು ಸಮರ್ಪಣೆ

maski temple
ನಾವುಂದ ಮಸ್ಕಿ ಶ್ರೀ ಗೋಪಾಲಕೃಷ್ಣ ದೇವರು.
Published on

ಬೈಂದೂರು: ನಾವುಂದ ಮಸ್ಕಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಂಗಳವಾರ ವಿವಿಧ ಧಾರ್ಮಿಕ ವಿಧಿವಿಧಾನ ನಡೆಯಿತು.

ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ, ಮಹಾ ಪೂಜೆ, ಅನ್ನಸಂತರ್ಪಣೆ ಸೇವೆ ನೆರವೇರಿಸಲಾಯಿತು. ಭಕ್ತರಿಂದ ಭಜನಾ ಸಂಕೀರ್ತನೆ ನಡೆಯಿತು. ಬಾಲಕೃಷ್ಣ, ಮುದ್ದುಕೃಷ್ಣ ವೇಷ ಸ್ಪರ್ಧೆ, ಹಗ್ಗಜಗ್ಗಾಟ, ಭಕ್ತಿಗೀತೆ ಹಾಡುವಿಕೆ, ಮೊಸರು ಕುಡಿಕೆ ಒಡೆಯುವುದು ಹಾಗೂ ಓಕುಳಿ ಆಟ ಜರುಗಿತು. ಭಕ್ತರು ಸೋಮವಾರ ರಾತ್ರಿಯಿಂದ ದೇವರ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕೃಷ್ಣದೇವರ ನಾಮಸ್ಮರಣೆ ಮಾಡಿದರು.

ದೇವಸ್ಥಾನದ ಅರ್ಚಕ ನಾವುಂದ ರಾಘವೇಂದ್ರ ಕಾರಂತ್ ಮಾತನಾಡಿ,ಶ್ರೀ ಗೋಪಾಲಕೃಷ್ಣ ದೇವರಿಗೆ ಭಕ್ತರು ಮರದ ತೊಟ್ಟಿಲನ್ನು ಸಮರ್ಪಣೆ ಮಾಡಿದ್ದಾರೆ ಎಂದರು. ಮಸ್ಕಿ ಸತೀಶ್ ಭಟ್ ಮಾತನಾಡಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಾಬು ಶೆಟ್ಟಿ, ಸುರೇಶ ಖಾರ್ವಿ, ರಘು ಪೂಜಾರಿ, ಚಂದ್ರ ಪೂಜಾರಿ, ಬಾಬು ಪೂಜಾರಿ, ಗೌರಿ ಪೂಜಾರಿ, ಗಿರಿಜಾ ಮೊಗವೀರ, ಗ್ರಾಪಂ ಸದಸ್ಯ ರಾಮ ಎಸ್.ಖಾರ್ವಿ, ಗಣೇಶ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net