ಶಿರಸಿ ಶ್ರೀ ಅಮ್ಮನವರಿಗೆ ರಜತ ಪ್ರಭಾವಳಿ ಸಮರ್ಪಣೆ

gan-4
Published on

ಗಂಗೊಳ್ಳಿ: ಇಲ್ಲಿನ ಬೈಲುಮನೆಯಲ್ಲಿರುವ ಶಿರಸಿ ಶ್ರೀ ಅಮ್ಮನವರ, ಸಪರಿವಾರ ದೇವರುಗಳ ಸನ್ನಿಧಿಯಲ್ಲಿ ಶಿರಸಿ ಶ್ರೀ ಅಮ್ಮನವರಿಗೆ ರಜತ ಕಿರೀಟ, ರಜತ ಪ್ರಭಾವಳಿ ಸಮರ್ಪಣಾ ಕಾರ್ಯಕ್ರಮ ಭಾನುವಾರ ನೆರವೇರಿತು.

ಶ್ರೀ ವೀರೇಶ್ವರ ದೇವಸ್ಥಾನದಿಂದ ಸನ್ನಿಧಾನದವರೆಗೆ ಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ರಜದ ಕಿರೀಟ, ರಜದ ಪ್ರಭಾವಳಿ ತರಲಾಯಿತು. ಅರ್ಚಕ ರವೀಶ ಭಟ್, ವಿದ್ವತ್ ವೈದಿಕರು ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು. ಸನ್ನಿಧಾನದ ಅರ್ಚಕ ಆನಂದ ಬಿಲ್ಲವ ರಜತ ಕಿರೀಟವನ್ನು ಕೊಡ ಮಾಡಿದ ದಾನಿಗಳಾದ ಮನೋಜ್ ಖಾರ್ವಿ ಮತ್ತು ಅರುಣ ಖಾರ್ವಿ ಅವರನ್ನು ಅಭಿನಂದಿಸಿದರು.

ಜಿ.ಗೋಪಾಲ ಪೂಜಾರಿ, ನಾಗರಾಜ ಖಾರ್ವಿ, ಶಿವರಾಮ ಪೂಜಾರಿ, ಹರೀಶ ಪೂಜಾರಿ, ಭರತ ಪೂಜಾರಿ, ನಾಗರಾಜ ಪೂಜಾರಿ, ಗಣೇಶ ಪೂಜಾರಿ, ಗುಡ್ಡೆಕೇರಿಯ ಮತ್ತು ಊರ ಹತ್ತು ಸಮಸ್ತರು, ಬೈಲುಮನೆ ಕುಟುಂಬಸ್ಥರು ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net