ಮಹಿಳೆಯರಲ್ಲಿ ಕಡಿಮೆಯಾದ ಓದುವ ಆಸಕ್ತಿ

ಮಹಿಳೆಯರಲ್ಲಿ ಕಡಿಮೆಯಾದ ಓದುವ ಆಸಕ್ತಿ
Published on

ಎಚ್.ಡಿ.ಕೋಟೆ; ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಪತ್ರಿಕೆ ಓದುವ ಆಸಕ್ತಿ ಕಡಿಮೆ ಆಗಿದೆ ಅದರಲ್ಲೂ ಮಹಿಳೆಯರಲ್ಲಿ ಕಡಿಮೆ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ದೀಪಾ ಅಭಿಪ್ರಾಯಪಟ್ಟರು.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಇರುವ ಮಕ್ಕಳ ಜಾಗೃತಿ ಸಂಸ್ಥೆ ಕಚೇರಿ ಆವರಣದಲ್ಲಿ ಬುಧವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಹಮ್ಮಿಕೊಂಡಿದ್ದ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ವಿಜೇತರನ್ನು ಆಯ್ಕೆ ಮಾಡಿ ಮಾತನಾಡಿದರು.

ಮಹಿಳೆಯರು ಬರೀ ಧಾರಾವಾಹಿಗಳನ್ನು ನೋಡುವುದಕ್ಕೆ ಮಾತ್ರ ಸೀಮಿತ ಆಗಿರುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಮಹಿಳೆಯರಲ್ಲಿ ಹೆಚ್ಚಿನ ಓದುವ ಆಸಕ್ತಿ ಬೆಳೆಸುವುದಕ್ಕೋಸರ ವಿಜಯವಾಣಿ ಪತ್ರಿಕೆ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡಿಪ್ ಸ್ಪರ್ಧೆಯನ್ನು ಮಾಡುತ್ತಿರುವುದು ಉತ್ತಮವಾದ ಕೆಲಸ. ಈ ಮೂಲಕ ಮಹಿಳೆಯರಲ್ಲಿ ಓದುವ ಆಸಕ್ತಿ ಹೆಚ್ಚಾಗುತ್ತದೆ ಎಂದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಗಾದೆ ಮಾತಿನಂತೆ ಮನೆಯಲ್ಲಿ ಮಹಿಳೆಯರು ದಿನ ಪತ್ರಿಕೆಗಳನ್ನು ಓದುವ ಮೂಲಕ ಹೆಚ್ಚು ಜ್ಞಾನವನ್ನು ಹೊಂದುವುದಕ್ಕೆ ಸಹಕಾರಿ ಆಗಲಿದೆ. ಮನೆಯಲ್ಲಿ ಮಕ್ಕಳು ಹಾಗೂ ಇತರ ಸದಸ್ಯರು ಹೆಚ್ಚು ಓದಲು ಸಹಕಾರಿ ಆಗಲಿದೆ. ಜತೆಗೆ ತಾಯಂದಿರು ಓದುವುದನ್ನು ನೋಡಿ ಮಕ್ಕಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಲು ಸಹಕಾರಿ ಆಗಲಿದೆ. ಈ ದಿಕ್ಕಿನಲ್ಲಿ ವಿಜಯವಾಣಿ ಪತ್ರಿಕೆ ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಪಟ್ಟಣದ ಶಿವಾಜಿ ರಸ್ತೆ ನಿವಾಸಿ ವಿ.ಲೇಪಾಕ್ಷಿ, ಡ್ರೈವರ್ ಕಾಲನಿ ನಿವಾಸಿ ದಾಕ್ಷಾಯಿಣಿ, ಗದ್ದಿಗೆ ವೃತ್ತದ ನಿವಾಸಿ ಕುಮಾರಿ, ಹೌಸಿಂಗ್ ಬೋರ್ಡ್ ಕಾಲನಿ ನಿವಾಸಿ ಬಿ.ಭಾಗ್ಯಲಕ್ಷ್ಮೀ, ಎಚ್.ಡಿ.ಕೋಟೆ ತಾಲೂಕಿನ ನೂರಲಕುಪ್ಪೆ ಗ್ರಾಮದ ನಿವಾಸಿ ಜಯಮ್ಮ, ದೇವಲಾಪುರ ಕಾಲನಿ ನಿವಾಸಿ ಎಚ್.ಬಿ.ಪವಿತ್ರಾ, ಸರಗೂರು ತಾಲೂಕಿನ ನರಸೀಪುರ ಗ್ರಾಮದ ದೇವಪುತ್ರಿ, ಹೂವಿನಕೊಳ ಗ್ರಾಮದ ಸುಜಾತಾ, ಕಾಳನಹುಂಡಿ ಗ್ರಾಮದ ಸುಷ್ಮಾ ಹಾಗೂ ಮಹಾದೇವಮ್ಮ ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾದ ವಿಜೇತರು.

ಕಾರ್ಯಕ್ರಮದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ರಂಜಿನಿ, ಹಿಂದುಶ್ರೀ, ಮಕ್ಕಳ ಜಾಗೃತಿ ಸಂಸ್ಥೆ ವ್ಯವಸ್ಥಾಪಕಿ ದಿವ್ಯಾ, ವಿಜಯವಾಣಿ ಪತ್ರಿಕೆ ವರದಿಗಾರರಾದ ದೊಡ್ಡಸಿದ್ದು ಹಾಗೂ ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net