ಧಾರವಾಡ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೊಷಿಸಿ

29-nvl-2-former
Published on

ನವಲಗುಂದ: ಧಾರವಾಡ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೊಷಣೆ ಮಾಡುವಂತೆ ಆಗ್ರಹಿಸಿ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿಯಿಂದ ಶಿರಸ್ತೇದಾರ ಎಂ.ಬಿ. ಮಗದುಮ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಮಳೆಯು ನಿರೀಕ್ಷೆಗೆ ತಕ್ಕಂತೆ ಮಳೆಯಾಗದ್ದರಿಂದ ತಾಲೂಕು ಸೇರಿ ಧಾರವಾಡ ಜಿಲ್ಲೆಯನ್ನು ಬರ ಪ್ರದೇಶವೆಂದು ಘೊಷಿಸಬೇಕು. ಅಲ್ಲದೆ, ಶೀಘ್ರ ಕಳಸಾ- ಬಂಡೂರಿ ಕಾಮಗಾರಿ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು ಮತ್ತು ಬೆಳೆ ವಿಮೆ ಬೆಳೆ ಪರಿಹಾರವನ್ನು ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸುಭಾಸಚಂದ್ರಗೌಡ ಪಾಟೀಲ, ಸಿದ್ದಪ್ಪ ಮುಪ್ಪಯ್ಯನವರ, ಎಸ್.ಬಿ. ಪಾಟೀಲ್, ಮಲ್ಲೇಶ ಉಪ್ಪಾರ, ಬಸನಗೌಡ ಹುಣಸಿಕಟ್ಟಿ, ಮಲ್ಲಪ್ಪ ಬಸೆಗೋನ್ನವರ, ಗೋವಿಂದರೆಡ್ಡಿ ಮೊರಬದ, ಸಿದ್ದಲಿಂಗಪ್ಪ ಹಳ್ಳದ, ಸಂಗಪ್ಪ ನೀಡವನಿ, ಮುರಗೆಪ್ಪ ಪಲ್ಲೇದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net