13ರಂದು ಪ್ರತಿಭಟನೆಗೆ ನಿರ್ಧಾರ

Decision to protest on 13th
ವಿಜಯಪುರದ ದರಬಾರ ಪದವಿ ಕಾಲೇಜಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆಗಳ ಕುರಿತ ನಡೆದ ದುಂಡು ಮೇಜಿನ ಸಭೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿದರು. ಗಿರೀಶ ಮಣೂರ, ವಿನಾಯಕ ಗ್ರಾಮಪುರೋಹಿತ, ಬಿ.ಎಸ್. ಬಾಪಗೊಂಡ ಮತ್ತಿತರರಿದ್ದರು.
Published on

ವಿಜಯಪುರ: ನಗರದ ದರಬಾರ ಪದವಿ ಕಾಲೇಜಿನಲ್ಲಿ ಶುಕ್ರವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆಗಳ ಕುರಿತ ದುಂಡು ಮೇಜಿನ ಸಭೆ ನಡೆಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಪದವಿ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಶೈಕ್ಷಣಿಕ ಸಮಸ್ಯೆಗಳ ಕುರಿತ ಚರ್ಚೆ ನಡೆಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ ಮಾತನಾಡಿ, ವಿವಿಯಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು ಅದರಲ್ಲಿ ಪ್ರಮುಖವಾಗಿ ಉತ್ತೀರ್ಣವಾದ ವಿದ್ಯಾರ್ಥಿಯು ಮತ್ತೆ ಫಲಿತಾಂಶ ನೋಡಿದಾಗ ಅನುತೀರ್ಣ ಎಂದು ಬರುತ್ತಿದೆ.

ಪರೀಕ್ಷೆಗಳು ನಡೆದು ತಿಂಗಳುಗಳೇ ಗತಿಸಿದರೂ ಫಲಿತಾಂಶ ಬಂದಿರುವುದಿಲ್ಲ. ವಿದ್ಯಾರ್ಥಿಗಳು ಸಮಸ್ಯೆ ಎಂದು ವಿವಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ.

ಬೋಧನಾ ವಿಷಯಗಳ ಕುರಿತ ವಿವಿಗೆ ಸ್ಪಷ್ಟನೆ ಇಲ್ಲದೇ ತರಗತಿ ಆರಂಭಿಸಿ ತಿಂಗಳ ನಂತರ ವಿಷಯ ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಠಿ ಮಾಡುತ್ತಿರುವುದು ಸೇರಿ ಹಲವು ಸಮಸ್ಯೆಗಳನ್ನ ಬಗೆಹರಿಸುವಂತೆ ಆಗ್ರಹಿಸಿ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಫೆ. 13ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಎಬಿವಿಪಿ ಉತ್ತರ ಪ್ರಾಂತದ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಶೈಕ್ಷಣಿಕ ದೃಷ್ಠಿಯಿಂದ ತ್ವರಿತವಾಗಿ ರಾಜ್ಯದ ಉನ್ನತ ಶಿಕ್ಷಣ ಇಲಾಖೆ, ವಿವಿ ಕುಲಪತಿ ಮತ್ತು ಕುಲಸಚಿವರು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಪ್ರಾಚಾರ್ಯರಾದ ಗಿರೀಶ ಮಣೂರ, ವಿನಾಯಕ ಗ್ರಾಮಪುರೋಹಿತ, ಬಿ.ಎಸ್. ಬಾಪಗೊಂಡ, ಎಂ.ಎಸ್. ಝಳಕಿ, ಕವಿತಾ ಬಿರಾದಾರ, ಸಂದೀಪ ಅರಳಗುಂಡಿ, ಅಭಿಷೇಕ ಬಿರಾದಾರ, ರೇಖಾ ಮಾಳಿ, ಶ್ರೀಕಾಂತ ಬಿರಾದಾರ, ಸುಲೋಚನಾ ಸೂರ್ಯವಂಶಿ, ಸುಜ್ಞೆತಾ ಕುಲಕರ್ಣಿ, ಪೂಜಾ ವಿರಶೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net