

ದಾಂಡೇಲಿ: ನಗರಸಭೆಯ 2019-20ನೇ ಸಾಲಿನ ಮೊದಲ ಸಾಮಾನ್ಯ ಸಭೆ ಮಂಗಳವಾರ ಅಧ್ಯಕ್ಷೆ ಸರಸ್ಪತಿ ರಜಪೂತ ಅಧ್ಯಕ್ಷತೆಯಲ್ಲಿ ಜರುಗಿತು.
ಅಧ್ಯಕ್ಷರ ಓಡಾಟಕ್ಕೆ ಬಾಡಿಗೆ ಕಾರ್ನ ಬದಲು ನಗರಸಭೆಗೆ ಸ್ವಂತ ವಾಹನ ಖರೀದಿಸಲು ಪ್ರಸ್ತಾವನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಹಾಗೂ ಬೆಂಗಳೂರಿನ ಪುರಸಭೆ ಆಡಳಿತ ನಿರ್ದೇಶಕರಿಗೆ ಕಳಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಹಿರಿಯ ಸದಸ್ಯ ಆದಂ ದೇಸೂರ ನಗರ ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ಜನವರಿ 15ರ ಒಳಗೆ ಎಕ್ಸ್ಪ್ರೆಸ್ಲೈನ್ ಅಳವಡಿಸಲು ನೀರು ಸರಬರಾಜು ಇಲಾಖೆಯ ಸಹಾಯಕ ಇಂಜಿನಿಯರ್ಗೆ ಸೂಚನೆ ನೀಡಿದರು.
2020-21ನೇ ಸಾಲಿನ ಶೇ. 24.10, ಶೇ. 7.25 ಮತ್ತು ಶೇ. 5ರ ನಿಧಿ ಅಡಿ ಕ್ರಿಯಾಯೋಜನೆ ಮಂಜೂರಾತಿ ಮತ್ತು ಫಲಾನುಭವಿಗಳ ಆಯ್ಕೆಗೆ ಮೊದಲು ಆಯಾ ವಾರ್ಡಿನ ಸದಸ್ಯರ ಗಮನಕ್ಕೆ ತರಬೇಕೆಂದು ಸದಸ್ಯ ಮೋಹನ ಹಲವಾಯಿ ನೀಡಿದ ಸೂಚನೆಗೆ ಅಧ್ಯಕ್ಷರು ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಅನೇಕ ವಿಷಯಗಳ ಕುರಿಂತೆ ಚರ್ಚೆ ನಡೆಸಿ ಅಗತ್ಯ ಕಾಮಗಾರಿಗಳಿಗೆ ಒಪ್ಪಿಗೆ ಸೂಚಿಸಲಾಯಿತು.
ನಗರಸಭೆಯ ವಿರೋಧ ಪಕ್ಷದ ನಾಯಕ ಸದಸ್ಯ ನರೇಂದ್ರ ಚವ್ಹಾಣ, ಸದಸ್ಯರಾದ ಯಾಸ್ಮಿನ್ ಕಿತ್ತೂರ, ರೋಶನ ಜಿತ್, ದಶರಥ ಬಂಡಿವಡ್ಡರ, ಬುದಿವಂತಗೌಡ ಪಾಟೀಲ, ಪದ್ಮಾ ಜನ್ನು, ರಮಾ ರವೀಂದ್ರ, ಮಜಿದ್ ಸನದಿ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ್, ಪೌರಾಯುಕ್ತ ಶೈಲೇಶ ಪರಮಾನಂದ ಹಾಗೂ ನಗರಸಭೆಯ ಮ್ಯಾನೇಜರ್ ಪರಶುರಾಮ ಚಿಕ್ಕಳಗಾರ ಹಾಗೂ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು.
ಪ್ರಮಾಣ ವಚನ ಭೋಧನೆ : ನಗರಸಭೆಯ ಆರಂಭದಲ್ಲಿ ನಗರಸಭೆಯ ಎಲ್ಲ ಸದಸ್ಯರಿಗೆ ನಗರಸಭೆಯ ಪೌರಾಯುಕ್ತ ಹಾಗೂ ದಾಂಡೇಲಿಯ ತಹಸೀಲ್ದಾರ ಶೈಲೇಶ ಪರಮಾನಂದ ಪ್ರಮಾಣ ವಚನ ಭೋದಿಸಿದರು.
ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ: ಸಾಮಾನ್ಯ ಸಭೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಸದಸಸ್ಯರನ್ನಾಗಿ ನಗರಸಭಾ ಸದಸ್ಯರಾದ ಆದಂ ದೇಸೂರ, ಶಿಲ್ಪಾ ಕೊಡೆ, ಶಾಹಿದಾ ಪಠಾಣ, ಪ್ರೀತಿ ನಾಯರ, ರುಹಿನಾ ಖತಿಬ್, ವೆಂಕಟರಮಣಮ್ಮ ಮೈತಕುರಿ ರುಕ್ಮೀಣಿ ಬಾಗಡೆ, ಆಸಿಫ್ ಮುಜಾವರ್, ಅನಿಲ ನಾಯ್ಕರ, ಮೌಲಾಲಿ ಮುಲ್ಲಾ, ಮೋಹನ ಹಲವಾಯಿ ಆಯ್ಕೆಗೊಂಡಿದ್ದಾರೆ.