

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಮಗಳ ಸಾವಿನ ಕುರಿತು ಮಾತನಾಡಿರುವ ನೇಹಾ ತಂದೆ ನಿರಂಜನ್ ಕುಮ್ಮಕ್ಕು ಕೊಟ್ಟ ಕಾರಣಕ್ಕೆ ಮಗಳನ್ನು ಕಳೆದುಕೊಂಡೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ನಿರಂಜನ್ ಹಿರೇಮಠ್, ನಾನು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಶಿಷ್ಯ. ಕಾರಣಾಂತರಗಳಿಂದ ನಾನು ಕಾಂಗ್ರೆಸ್ ಸೇರಬೇಕಾಯಿತು. ಆ ಕಡೆ ಹೋಗಿದ್ದಕ್ಕೆ ಮಗಳನ್ನು ಕಳೆದುಕೊಂಡೆ. ನಾನು ಸಾರ್ವಜನಿಕ ವಲಯದಲ್ಲಿ ಇರೋನು. ನನಗೆ ಹೀಗಾದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಕುಮ್ಮಕ್ಕು ಕೊಟ್ಟ ಕಾರಣಕ್ಕೆ ಮಗಳನ್ನು ಕಳೆದುಕೊಂಡೆ. ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ನಿಮ್ಮ ಪಕ್ಷದವರು ಯಾರೂ ಇದನ್ನು ಖಂಡನೆ ಮಾಡಲ್ಲ ಎಂದ ಯತ್ನಾಳ್ ಹೇಳಿದ್ದು, ನೀವೇ ಮನಸು ಮಾಡಿ ಎಂದು ನೇಹಾಳ ತಂದೆ ಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ್ ಜನರಲ್ಲಿ ಕೇಳಿಕೊಂಡಿದ್ದಾರೆ.