ಕರ ವಸೂಲಿಗಾರ ಆತ್ಮಹತ್ಯೆ ಯತ್ನ : ದೇವಾಪುರ ಗ್ರಾಪಂ ಅಧ್ಯಕ್ಷ ಪಿಡಿಒ ವಿರುದ್ಧ ಎಫ್‌ಐಆರ್

FIR-2
Published on



ವಿಜಯವಾಣಿ ಸುದ್ದಿಜಾಲ ಸುರಪುರ
ತಾಲೂಕಿನ ದೇವಾಪುರ ಗ್ರಾಪಂ ಕರ ವಸೂಲಿಗಾರ ಯಲ್ಲಪ್ಪ ಅರಳಗುಂಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ವಿರುದ್ದ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ವೆಚ್ಚ ಮಾಡಿದ ಹಣ ಹಿಂದಿರುಗಿಸುವAತೆೆ ಕೇಳಿದಾಗ ಕೊಡಲ್ಲ ಎಂದು ಹೇಳಿ ನಿಂದಿಸಿದ್ದರಿAದ ನೊಂದುಕೊAಡು ಕರವಸೂಲಿಗಾರ ಯಲ್ಲಪ್ಪ ವಿಷ ಸೇವಿಸಿದ್ದಾರೆ ಎಂದು ಅವರ ಪುತ್ರ ವೆಂಕಟೇಶ ದೂರು ನೀಡಿ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸುಮಾರು ವರ್ಷಗಳಿಂದ ಕರವಸೂಲಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಪಂ ವಿವಿಧ ಕಾಮಗಾರಿಗಳಿಗೆ ಸಾಲ ಮಾಡಿ ಹಣ ಕೊಟ್ಟಿದ್ದಾರೆ. ಈ ಬಗ್ಗೆ ಕುಟುಂಬದವರ ಮುಂದೆ ಚರ್ಚಿಸುತ್ತಿದ್ದರು. ಕಾಮಗಾರಿಗಾಗಿ ವ್ಯಯಿಸಿದ್ದ ೩.೭೫ ಲಕ್ಷ ರೂ. ಮಂಜೂರು ಮಾಡಿಲ್ಲ. ಅಧ್ಯಕ್ಷ ಮತ್ತು ಪಿಡಿಒ ಅವರಿಗೆ ಹಣ ಹಿಂದಿರುಗಿಸುವAತೆ ಕೇಳಿದರೂ ಕೊಟ್ಟಿಲ್ಲ.
ಕಳೆದ ಆಗಸ್ಟ್ ೨೦ರಂದು ಗ್ರಾಪಂ ಆವರಣದಲ್ಲಿ ಅಧ್ಯಕ್ಷರು, ಪಿಡಿಒ ಅವರು ಅವಾಚ್ಯ ಶಬ್ದಗಳಿಂದ ತಮ್ಮ ತಂದೆಗೆ ನಿಂದಿಸಿದ್ದಾರೆ. ಕೆಲಸಕ್ಕೆ ಬರಬೇಡ. ಯಾವುದೇ ಹಣ ಕೊಡುವುದಿಲ್ಲ ಎಂದಿದ್ದರು. ಹಣ ಕೊಡದಿದ್ದರೆ ನಾನು ಸಾಯಬೇಕಾಗುತ್ತದೆ ಎಂದರೂ, ನಾವೇ ವಿಷ ತಂದು ಕೊಡುತ್ತೇವೆ ಎನ್ನುವ ಮೂಲಕ ಪ್ರಚೋದಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಆ.೨೧ರಂದು ಶೆಳ್ಳಗಿ ಕ್ರಾಸ್ ಬಳಿ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
----
ದೇವಾಪುರ ಗ್ರಾಪಂ ಅಧ್ಯಕ್ಷ, ಪಿಡಿಒ ವಿರುದ್ಧ ಸುರಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ಬರಿಗೂ ನೋಟಿಸ್ ನೀಡಿ ದೂರಿನ ಕುರಿತು ವಿವರಣೆ ನೀಡುವಂತೆ ಸೂಚಿಸಲಾಗಿದೆ. | ಆನಂದ ವಾಗ್ಮೋಡೆ, ಇನ್‌ಸ್ಪೆಕ್ಟರ್ ಸುರಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net