ಮೂವರು ವಿದ್ಯಾರ್ಥಿಗಳ ಮರಣ

FotoJet (4)
Published on

ಟ್ಯೂಷನ್ ಮುಗಿಸಿ ಗ್ರಾಮಕ್ಕೆ ವಾಪಸಾಗುತ್ತಿದ್ದಾಗ ಅಪಘಾತ


ಚಿಕ್ಕಬಳ್ಳಾಪುರ : ತಾಲೂಕಿನ ಗೇರಹಳ್ಳಿ ಗೇಟ್ ಸಮೀಪ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನ ನಡುವೆ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ನಗರದ ಬಿಜಿಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ನಿತೀನ್ ( 17), ನಿತೀಶ್ ಗೌಡ (17) ಮತ್ತು ಗುಡ್ ಶೆಫರ್ಡ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ವೈಭವ್ (16) ಮೃತರು. ಮೂವರು ಅಗಲಗುರ್ಕಿ ಗ್ರಾಮದವರು.
ಘಟನೆ ವಿವರ
ಆವಲಗುರ್ಕಿಯ ಮೂವರು ವಿದ್ಯಾರ್ಥಿಗಳು ಶಾಲಾ-ಕಾಲೇಜಿನ ತರಗತಿಯ ಬಳಿಕ ಸಂಜೆ ಗ್ರಾಮದಲ್ಲಿನ ಶಿಕ್ಷಕರ ಬಳಿ ಟ್ಯೂಷನ್‌ಗೆ ಹೋಗಿದ್ದರು. ಪಾಠ ಮುಗಿದು ಮತ್ತೆ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ರಸ್ತೆಯ ಬದಿಯಲ್ಲಿ ಜೆಸಿಬಿ ವಾಹನದ ಟಯರ್ ಸಾಗಿಸಲು ಟ್ರ್ಯಾಕರ್ ನಿಂತಿತ್ತು. ಇದೇ ವೇಳೆ ಕತ್ತಲಿನಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲಿಯೇ ಇಬ್ಬರು, ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ಜಿಲ್ಲಾಸ್ಪತ್ರೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗ್ರಾಮದಲ್ಲಿ ನೀರವ ಮೌನ
ಮೂವರನ್ನು ಬಲಿ ಪಡೆದುಕೊಂಡ ಅಪಘಾತದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತರ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net