ಒಂದೇ ಮನೆಯಲ್ಲಿ ಐವರ ಆತ್ಮಹತ್ಯೆ; ಮನೆವರೆಗೂ ಬಂದ ಅವರು ವಾಪಸ್ ಹೋಗಿದ್ದೇ ತಪ್ಪಾಯಿತಾ?

Suicide 2
Published on

ಬೆಂಗಳೂರು: ಒಂಬತ್ತು ತಿಂಗಳ ಮಗುವಿನ ಸಹಿತ ಒಂದೇ ಮನೆಯ ಐವರ ಸಾವಿನ ಪ್ರಕರಣದ ಸುತ್ತ ಇದೀಗ ಅನುಮಾನದ ಹುತ್ತ ಆವರಿಸಿದೆ. ಮನೆ ಯಜಮಾನ ಪೊಲೀಸರ ಪ್ರಶ್ನೆಗಳಿಗೆ ನೀಡುವ ಉತ್ತರಗಳ ಮೇಲೆ ಪ್ರಕರಣದ ಕುರಿತು ಮತ್ತಷ್ಟು ವಿವರ ಹಾಗೂ ನಿಖರ ಅಂಶಗಳು ಹೊರಬೀಳಬೇಕಿವೆ.

ಅಷ್ಟಕ್ಕೂ ಐವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಮಗುವಿಗೆ ಕಿವಿ ಚುಚ್ಚುವ ವಿಚಾರವಾಗಿ ನಡೆದ ಗಲಾಟೆಯೇ ಇದಕ್ಕೆ ಕಾರಣ ಎಂಬ ಒಂದು ಅಂಶವೂ ಕೇಳಿಬರುತ್ತಿದೆ. ಮತ್ತೊಂದೆಡೆ ಮಗಳು ಗಂಡನ ಮನೆಗೆ ಹೋಗುವ ವಿಚಾರಕ್ಕೆ ಶಂಕರ್ ಮತ್ತು ಕುಟುಂಬ ಸದಸ್ಯರ ನಡುವೆ ಜಗಳ ಉಂಟಾಗಿತ್ತು ಎನ್ನಲಾಗಿದೆ.

ಹೀಗೆ ಕುಟುಂಬ ಕಲಹ ಉಂಟಾದ್ದರಿಂದ ಶಂಕರ್ ಮೂರು ದಿನಗಳಿಂದ ಮನೆಯಿಂದ ದೂರ ಉಳಿದಿದ್ದರು. ನಂತರ ಮಕ್ಕಳಿಗೆ ಕರೆ ಮಾಡಿದ್ದಾರೆ. ಎಷ್ಟು ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಗುರುವಾರ ಮನೆ ಬಳಿಗೆ ಬಂದಿದ್ದರು. ಆಗ ಡೋರ್ ಲಾಕ್ ಆಗಿರುವುದನ್ನು ಕಂಡು ಎಲ್ಲಿಗಾದರೂ ಹೋಗಿರಬೇಕೆಂದು ವಾಪಸ್ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಶಂಕರ್ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ ಮೇಲಷ್ಟೇ ಪ್ರಕರಣದ ಕುರಿತ ಸ್ಪಷ್ಟ ಚಿತ್ರಣ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net