

ಮಾಗಡಿ: ತಾಲೂಕಿನ ಸೋಲೂರು ಹೋಬಳಿ ಲಕ್ಕೇನಹಳ್ಳಿ ಬಳಿಯ ಖಾಸಗಿ ಕಂಪನಿಯಲಿ ಜೇನು ಹುಳಗಳ ಮಾರಣ ಹೋಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಲವು ತಿಂಗಳಿಂದ ಕಂಪನಿ ಒಳಗೆ ಜೇನುಹುಳಗಳು ಗೂಡು ಕಟ್ಟಿಕೊಂಡಿದ್ದು, ಯಾರಿಗೂ ತೊಂದರೆ ನೀಡಿರಲಿಲ್ಲ. ಆದರೆ ಕಂಪನಿಯ ಸಿಬ್ಬಂದಿ ಸೋಮವಾರ ಕೆಮಿಕಲ್ ಸ್ಪ್ರೇ ಬಳಸಿ ಲಕ್ಷಾಂತರ ಜೇನುಹುಳಗಳನ್ನು ಸಾಯಿಸಿರುವ ಆರೋಪ ಕೇಳಿಬಂದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ದಸ್ತುವನಪಾಲಕ ಸಂದೀಪ್ ಭೇಟಿ ನೀಡಿದ್ದಾರೆ. ಈ ಕೃತ್ಯದ ಬಗ್ಗೆ ಪರಿಶೀಲಿಸಿ, ವಿಚಾರಿಸಿ ಕೃತ್ಯದಲ್ಲಿ ಭಾಗಿಯಾಗಿರುವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಚೈತ್ರಾ, ವಲಯ ಅರಣ್ಯಾಧಿಕಾರಿ ಮಾಗಡಿ.