

ಹಿರೇಕೆರೂರ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸ ಮಾಡುವ ಕಾರ್ವಿುಕನೊಬ್ಬ ಶನಿವಾರ ಬೆಳಗ್ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಕಚವಿ ಗ್ರಾಪಂ ವಾಪ್ತಿಯಲ್ಲಿ ಸಂಭವಿಸಿದೆ.
ಗ್ರಾಮದ ಹಜರತಲಿ ಚಮನಸಾಬ್ ಮಾರುಸಾಬನವರ(50) ಮೃತ ಕೂಲಿಕಾರ್ವಿುಕ. ತಿಂಗಳ ಹಿಂದೆ ಕೆಲಸದ ಸಂದರ್ಭದಲ್ಲಿ ಕಾಲಿಗೆ ಗುದ್ದಲಿ ಏಟು ಬಿದ್ದು ತೀವ್ರ ಗಾಯವಾಗಿತ್ತು. ಈ ವಿಷಯವನ್ನು ಜಿಪಂ ಸಿಇಒ ಗಮನಕ್ಕೆ ತರಲಾಗಿತ್ತು. ಗಾಯ ದೊಡ್ಡದಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಎಂದಿನಂತೆ ಶನಿವಾರ ಕೆಲಸಕ್ಕೆ ಹಾಜರಾಗಿದ್ದರು. ಇದ್ದಕ್ಕಿದ್ದಂತೆ ಕಾಲಿನ ನೋವು ತೀವ್ರವಾಗಿ ಕಾಣಿಸಿಕೊಂಡು ದೇಹಕ್ಕೆ ನಂಜು ಏರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹಜರತಲಿ ಅವರ ಕುಟುಂಬವು ಈಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಹಾವೇರಿ ಜಿಲ್ಲಾ ಕೂಲಿ ಕಾರ್ವಿುಕರ ಸಂಘಟನೆ ಪರವಾಗಿ ಎಸ್.ಡಿ. ಬಳಿಗಾರ, ಸಚಿನ ಬೂದಿಹಾಳ, ಗುತ್ತೆಮ್ಮ ಸುಣಗಾರ, ಮದಾರಾಸಾಬ್ ಹಿರಳ್ಳಿ ಆಗ್ರಹಿಸಿದ್ದಾರೆ