ವಿಷಪೂರಿತ ಹಾವು ಕಡಿತದಿಂದ ಮೃತ್ಯು

New Project (28)
Published on

ಕಾಸರಗೋಡು: ವಿಷಪೂರಿತ ಹಾವಿನ ಕಡಿತದಿಂದ ಚಿಕಿತ್ಸೆಯಲ್ಲಿದ್ದ ಆದೂರು ಆಲಂತಡ್ಕ ನಿವಾಸಿ ಚಂದ್ರನ್(60) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಂದ್ರನ್ ಅವರಿಗೆ ಆ.21ರಂದು ಮನೆ ವಠಾರದಲ್ಲಿ ಹಾವು ಕಡಿದಿದ್ದು, ತಕ್ಷಣ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರಾವಸ್ಥೆಯಲ್ಲಿ ಮುಂದುವರಿಯುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net