ಉಸಿರಾಟ ಸಮಸ್ಯೆಯಿಂದ ಮೃತ್ಯು

death
Published on

ಕಾಸರಗೋಡು: ಉಸಿರಾಟದ ಸಮಸ್ಯೆಗೆ ಸಂಬಂಧಿಸಿ ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯ ಆರೈಕೆಗಾಗಿ ತಲುಪಿದ್ದ ಪುತ್ರಿ, ಉಸಿರಾಟದ ಅಸೌಖ್ಯ ಕಾಣಿಸಿಕೊಂಡು ಕಾಞಂಗಾಡಿನಲ್ಲಿ ಮೃತಪಟ್ಟಿದ್ದಾರೆ. ಚೆರ್ವತ್ತೂರು ಬಸ್ ನಿಲ್ದಾಣ ಸನಿಹ ಮಿಲ್ಮಾ ಬೂತ್ ನಡೆಸುತ್ತಿರುವ, ಞೌಣಂಗೈ ನಿವಾಸಿ ಶಶಿ ಕುಮಾರ್ ಪುತ್ರಿ ಎಸ್.ಅನಿತಾ(48) ಮೃತಪಟ್ಟ ಮಹಿಳೆ.

ಅನಿತಾ ತಾಯಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾವುಂಗಾಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ನೋಡಿಕೊಳ್ಳಲು ಆಗಮಿಸಿದ್ದ ಪುತ್ರಿ ಅನಿತಾಗೆ ಸೋಮವಾರ ನಸುಕಿಗೆ ಉಸಿರಾಟ ಸಮಸ್ಯೆ ತಲೆದೋರಿದ್ದು, ಜತೆಗೆ ಕೆಮ್ಮು ಕಾಣಿಸಿಕೊಂಡಿತ್ತು. ತಕ್ಷಣ ಅವರಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net