ಮೀನಿನ ಬಲೆಗೆ ಸಿಲುಕಿ ಸಾವು

ಮೀನಿನ ಬಲೆಗೆ ಸಿಲುಕಿ ಸಾವು
Published on

ಸುಂಟಿಕೊಪ್ಪ: ಹಾರಂಗಿ ಹಿನ್ನೀರಿನಲ್ಲಿ ಜಾನುವಾರುಗಳಿಗೆ ನೀರು ಕುಡಿಸಿ ಈಜಲು ತೆರಳಿದ ವ್ಯಕ್ತಿ ಮೀನಿನ ಬಲೆಗೆ ಸಿಲುಕಿ ಸಾವಿಗೀಡಾಗಿದ್ದಾರೆ.

ಕುಶಾಲನಗರ ತಾಲೂಕಿನ ಬಾಳುಗೋಡು ನಿವಾಸಿ ಬಾಲಕೃಷ್ಣ (42) ಮೃತ ದುರ್ದೈವಿ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದ್ರೆ ಹೇರೂರು ಗ್ರಾಮದ ಮಾದಪ್ಪ ಅವರ ಮನೆಗೆ ಶುಕ್ರವಾರ ಬಂದಿದ್ದ ಬಾಲಕೃಷ್ಣ, ಶನಿವಾರ ಜಾನುವಾರುಗಳಿಗೆ ಹಾರಂಗಿ ಹಿನ್ನೀರಿನಲ್ಲಿ ನೀರು ಕುಡಿಸಿ ಈಜುವ ಸಂದರ್ಭ ಮೀನಿನ ಬಲೆಗೆ ಕಾಲು ಸಿಲುಕಿ ಮುಳುಗಿ ಸಾವಿಗೀಡಾಗಿದ್ದಾರೆ.

ಸ್ಥಳೀಯರು ಮೃತದೇಹವನ್ನು ಹೊರತೆಗೆದಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net