ವಿದ್ಯುತ್​ ಹರಿದು ಸಾವು

Published on

ಗುಡಿಬಂಡೆ: ವಿದ್ಯುತ್​ ಕಾರ್ಮಿಕನೋರ್ವ ಕೆಲಸ ಮಾಡುತ್ತಿದ್ದಾಗ ವಿದ್ಯುತ್​ ಹರಿದು ಮೃತಪಟ್ಟಿದ್ದ ಸಂಗತಿಯನ್ನು ಮುಚ್ಚಿಹಾಕಲು ಯತ್ನಿಸಿದ್ದು, ಆರೋಪಿಯನ್ನು ಗುಡಿಬಂಡೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ರವಿ (33) ಮೃತ. ತಾಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್​ ಬಳಿಯ ಕೋಳಿಾಮ್​ರ್ ಬಳಿ ಭಾನುವಾರ ಮತ್ತು ಸೋಮವಾರ ವಿದ್ಯುತ್​ ಕಾಮಗಾರಿ ಮಾಡಲು ಬೀಚಗಾನಹಳ್ಳಿ ಗ್ರಾಮದ ಲೈನ್​ಮೆನ್​ ಚಂದ್ರಕುಮಾರ್​ ರವಿಯನ್ನು ಕರೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್​ ಹರಿದು ಕಂಬದಲ್ಲಿ ಸುಟ್ಟು ಕರಕಲಾಗಿದ್ದಾನೆ. ಈ ವಿಚಾರ ಯಾರಿಗೂ ತಿಳಿಸದೇ, ತನಗೆ ಏನೂ ತಿಳಿದಿಲ್ಲ ಎಂಬಂತೆ ಚಂದ್ರಕುಮಾರ್​ ಮನೆಗೆ ಬಂದಿದ್ದನಂತೆ. ರವಿ ಎರಡು ದಿನವಾದರೂ ಮನೆಗೆ ಬಾರದ ಕಾರಣ ಅವರ ಸಂಬಂಧಿಕರು ಗುಡಿಬಂಡೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.ಲೈನ್​ಮ್ಯಾನ್​ ಚಂದ್ರ ಕುಮಾರ್​ಗೆ ತಿಳಿಯುತ್ತಿದ್ದಂತೆ ಪೋನ್​ ಮನೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಗುಡಿಬಂಡೆ ಪೊಲೀಸರು ಸ್ಥಳಕ್ಕೆ ತನಿಖೆ ಕೈಗೊಂಡು ಆರೋಪಿ ಚಂದ್ರಕುಮಾರ್​ನನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆ ನಡೆಸಿದಾಗ ಮೃತ ರವಿ ದೇಹವನ್ನು ಬಂದಾರ್ಲಹಳ್ಳಿ ಕೆರೆಯಲ್ಲಿ ಹಾಕಿರುವುದಾಗಿ ಬಾಯ್ಬಿಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net