ತೆಂಗಿನಮರದಿಂದ ಬಿದ್ದು ಸಾವು

Death
Published on

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಬಸವನಕಜೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ತೆಂಗಿನ ಮರ ಕಡಿಯಲು ಮರ ಹತ್ತಿದ್ದ ಕೂಲಿ ಕಾರ್ಮಿಕರೊಬ್ಬರು ತೆಂಗಿನ ಮರ ತುಂಡಾಗಿ, ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಅಲಂಗಾರು ಚಂದ್ರಾಪುರ ನಿವಾಸಿ ನವೀನ್ ಪ್ರಕಾಶ್ ರೋಡ್ರಿಗಸ್(40) ಮೃತರು. ಅಬಕಾರಿ ನಿವೃತ್ತ ನಿರೀಕ್ಷಕ ದೇವೋಜಿ ರಾವ್ ಮನೆ ತೆಂಗಿನಮರಕ್ಕೆ ಸಿಡಿಲು ಬಡಿದು ಹಾನಿಯಾಗಿತ್ತು. ಈ ಮರ ಕಡಿಯಲೆಂದು ಅವರು ಮರ ಏರಿದ್ದರು. ಅರ್ಧದವರೆಗೆ ಹತ್ತಿದ್ದಾಗ ಮರ ತುಂಡಾಗಿ, ನವೀನ್ ನೆಲಕ್ಕೆ ಬಿದ್ದು ಗಂಭೀರ ಏಟು ತಗುಲಿ ಮೃತಪಟ್ಟರು. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net