ಕಟ್ಟಡದಿಂದ ಬಿದ್ದು ಸಾವು

Published on

ಮಾಗಡಿ: ನಿರ್ಮಾಣ ಹಂತದ ಎರಡು ಅಂತಸ್ತಿನ ಕಟ್ಟಡದಿಂದ ಬಿದ್ದು ಖಾಸಗಿ ಸಂಸ್ಥೆಯ ಉದ್ಯೋಗಿ ಮೃತಪಟ್ಟಿದ್ದಾರೆ.

ಪಟ್ಟಣದ ಕೋಟಪ್ಪನ ಪಾಳ್ಯದ ನಿವಾಸಿ, ಇಂಜಿನಿಯರ್​ ಕೆ.ಸಿ.ಚಂದ್ರಪ್ಪ (33) ಮೃತ.

ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯ ಎರಡನೇ ಮಹಡಿಯ ಛಾವಣಿ ಮೇಲೆ ನಿಂತಿದ್ದ ನೀರನ್ನು ತೆರವುಗೊಳಿಸಿ ಕೆಳಗೆ ಇಳಿಯುವ ವೇಳೆ ಏಣಿಯಲ್ಲಿ ಆಯ ತಪ್ಪಿ ಬಿದ್ದಿದ್ದಾರೆ. ಈ ವೇಳೆ ತಲೆ ಭಾಗದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಮಾಗಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್​ಗೆ ರವಾನಿಸುತ್ತಿರುವಾಗಲೇ ಮೃತಪಟ್ಟಿದ್ದಾರೆ.

ಮನೆ ಕಟ್ಟಿದ ಮೇಲೆ ಮದುವೆಯಾಗಲು ನಿಶ್ಚಯಿಸಿದ್ದ ಚಂದ್ರಪ್ಪ, ಬಣ್ಣ ಬಳಿಯುವ ಕೆಲಸ ಉಳಿಸಿದ್ದರು. ಸ್ವಗ್ರಾಮ ಹುಲಿದುರ್ಗದ ಕೀಲಾರ ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರಿಗೆ ತಾಯಿ, ತಂದೆ ಸಹೋದರಿ ಇದ್ದಾರೆ. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net