ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತ್ಯು

New Project (15)
Published on

ಕಾಸರಗೋಡು: ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೆರ್ಲ ಬೇಂಗಪದವು ನಿವಾಸಿ ಹಾಗೂ ಪ್ರಸಕ್ತ ಬಜಕೂಡ್ಲು ಬಳಿ ವಾಸಿಸುತ್ತಿರುವ ದಿ.ಮೋನಪ್ಪ ಪೂಜಾರಿ ಅವರ ಪತ್ನಿ ರತ್ನಾವತಿ(63) ಮೃತಪಟ್ಟ ಮಹಿಳೆ. ನಿನ್ನೆ ರಾತ್ರಿ ಅವರು ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ ಬದಿಯಡ್ಕ ಠಾಣೆ ಪೊಲೀಸರು ಅಸಹಜ ಸಾವಿನ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net