ಮಾನ್ವಿಯಲ್ಲಿ ಅಧಿಕಾರಿಗಳು ಗೈರು

14mnv04
ಮಾನ್ವಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಆನಂದ ಭೊವಿ, ರೇಣುಗೋಪಾಲ ಭೋವಿ, ಹುಲಿಗೆಪ್ಪ ಭೋವಿ, ಅಮರೇಶ, ಅಮಿತ್ ಇದ್ದರು.
Published on

ಮಾನ್ವಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಕಾಯಕಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು.

ಜಯಂತಿ ಸರ್ಕಾರಿ ಕಾರ್ಯಕ್ರಮ, ಅದರೆ, ತಹಸೀಲ್ದಾರ್, ಉಪ ತಹಸೀಲ್ದಾರ್, ಅಧಿಕಾರಿಗಳು ಗೈರಾಗಿದ್ದರಿಂದ ಭೋವಿ ಸಮಾಜದ ಮುಖಂಡರಿಂದ ಅಸಮಾಧಾನ ವ್ಯಕ್ತವಾಗಿದೆ. ಕಾಯಕ, ದಾಸೋಹ ಮತ್ತು ಸಮಾನತೆ ತತ್ವಗಳನ್ನು ವಚನಗಳ ಮೂಲಕ ಸಾರಿದ ಸಿದ್ಧರಾಮೇಶ್ವರರ ಜಯಂತಿ ದಿನ ಪ್ರತಿ ಸಲ ಮೆರವಣಿಗೆ, ವೇದಿಕೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಸಮಾಜ ಕೆಲ ಮುಖಂಡರು ಹಾಗೂ ಕಚೇರಿ ಸಿಬ್ಬಂದಿ ಮಾತ್ರ ಪಾಲ್ಗೊಂಡಿದ್ದರು. ಭೋವಿ ಸಮಾಜದ ಇಚ್ಛಾಶಕ್ತಿ ಕೊರತೆ ಮತ್ತು ತಾಲೂಕು ಆಡಳಿತದ ನಿರ್ಲಕ್ಷೃದಿಂದ ಅದ್ದೂರಿಯಾಗಿ ಆಚರಿಸಿಲ್ಲ ಎಂಬ ಮಾತುಗಳು ಕೆಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net