

ತುಮಕೂರು: ಯುವಕನೊಬ್ಬನ ಶವ ಮರದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸುತ್ತಮುತ್ತಲಿನ ಜಾಗದಲ್ಲಿ ಆತಂಕ ಮೂಡಿಸಿರುವ ಪ್ರಕರಣವೊಂದು ವರದಿಯಾಗಿದೆ. ತುಮಕೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸುರಿಗೆನಹಳ್ಳಿ ಬಳಿ ಈ ಪ್ರಕರಣ ನಡೆದಿದೆ. ಗುಬ್ಬಿ ತಾಲೂಕಿನ ದೊಡ್ಡಕುನ್ನಾಲ ಗ್ರಾಮದ ಮಂಜುನಾಥ್ ಸಾವಿಗೀಡಾಗಿರುವ ಯುವಕ. ಸುರಿಗೆನಹಳ್ಳಿ ಪ್ರದೇಶದ ಮರವೊಂದರಲ್ಲಿ ಇಂದು ಮಧ್ಯಾಹ್ನ ಈತನ ಶವ ಕಂಡುಬಂದಿತ್ತು.
ಈತ ಯಾವಾಗ ಮನೆಯಿಂದ ಹೋಗಿದ್ದ, ಆತ್ಮಹತ್ಯೆಯಾ, ಕೊಲೆಯಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿದ್ದು, ಸಾವಿಗೆ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಸ್ಥಳಕ್ಕೆ ಸಿ.ಎಸ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.