ನಿವೃತ್ತ ಯೋಧನ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆ

crime
Published on

ಕಾಸರಗೋಡು: ಹೊಸದುರ್ಗ ಪುದುಕೈ ಚೇಡಿ ರಸ್ತೆ ನಿವಾಸಿ, ನಿವೃತ್ತ ಯೋಧ ಉಣ್ಣಿರಾಜ್(65) ಎಂಬುವರ ಮೃತದೇಹ ನೀಲೇಶ್ವರ ರೈಲ್ವೆ ನಿಲ್ದಾಣ ಸನಿಹ ಹಳಿಯಲ್ಲಿ ಪತ್ತೆಯಾಗಿದೆ. ರೈಲು ಡಿಕ್ಕಿಯಾಗಿ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಸೇನೆಯಿಂದ ನಿವೃತ್ತರಾದ ನಂತರ ಕೆಎಸ್ಸಾರ್ಟಿಸಿಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು. ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net