ಗಮಕ ಕಲೆಗೆ ಶ್ರೇಷ್ಠ ಸ್ಥಾನವಿದೆ ಗಮಕಿ ಯಜ್ಞೇಶ ರಾವ್ ಅಭಿಮತ

mng--9 july Gamaka
Published on

ಮಂಗಳೂರು: ಗಮಕ ಕಲೆಯು ನಮ್ಮ ಭಾರತೀಯ ಕಲೆಗಳಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಹಲವು ರಂಗ ಪ್ರಾಕಾರಗಳಲ್ಲಿ ಗಮಕವು ಸಾಹಿತ್ಯ, ಸಂಗೀತ, ಶ್ರುತಿ, ರಾಗಗಳ ಮಿಲನದಿಂದ ಉತ್ತಮ ಆರಾಧನಾ ಕಲೆ ಎಂದು ಪ್ರಸಿದ್ಧಿ ಪಡೆದಿದೆ ಎಂದು ಗಮಕಿ ಯಜ್ಞೇಶ್ ರಾವ್ ಹೊಸಬೆಟ್ಟು ಹೇಳಿದರು.


ಕೋಡಿಕಲ್‌ನ ವಿಪ್ರ ಸಮಾಗಮ ವೇದಿಕೆಯ ದ್ವೈಮಾಸಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನೇಕ ಕವಿಗಳ ರಚನೆಯನ್ನು ಹಾಡಿದಾಗ ಆತ್ಮಾನುಭೂತಿ ಮೂಡುತ್ತದೆ ಎಂದರು.


ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ಪ್ರಸ್ತಾವಿಸಿದರು. ವಿದ್ಯಾ ರಾವ್ ಸ್ವಾಗತಿಸಿದರು. ಕೋಶಾಧಿಕಾರಿ ಕಿಶೋರ ಕೃಷ್ಣ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಅನೂಪ್ ರಾವ್ ಬಾಗ್ಲೋಡಿಯವರು ಕಲಾವಿದರನ್ನು ಗೌರವಿಸಿದರು. ಬಳಿಕ ಯಜ್ಞೇಶ್ ರಾವ್ ರವರ ವಾಚನ, ವರ್ಕಾಡಿ ರವಿ ಅಲೆವೂರಾಯರಿಂದ ’ಅಕ್ಷಯ ಪಾತ್ರೆ’ ಎಂಬ ಭಾಗದ ಪ್ರವಚನ ಜರಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net