ಕಾಗಿಣಾ ನದಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ

IMG-20240904-WA0041
Published on

ಸೇಡಂ : ತಾಲೂಕಿನ ಕುರಕುಂಟಾ ಗ್ರಾಮದ ನಿವಾಸಿ ರಾಜು ನರಸಪ್ಪ (40) ಮೀನು ಹಿಡಿಯಲು ಹೋಗಿ ಸಂಗಾವಿ (ಟಿ) ಸಮೀದ ಕಾಗಿಣಾ ನದಿಯ ನಾಲೆಯಲ್ಲಿ ಶನಿವಾರ ಕೊಚ್ಚಿಕೊಂಡು ಹೋಗಿದ್ದು, ನಾಲ್ಕು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾನೆ.

ಕಳೆದ ಶನಿವಾರದಿಂದ ಅಗ್ನಿಶಾಮಕ ಹಾಗೂ ಎಸ್.ಡಿ.ಆರ್.ಎಫ್ ತಂಡ ಸತತ ನಾಲ್ಕುದಿನದಿಂದ ಶೋಧ ಕಾರ್ಯ ನಡೆಸುತಿತ್ತು. ಬುಧವಾರ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net