

ಕಡಬ: ಪಾಲ್ತಾಡಿ ಗ್ರಾಮದ ಪಾರ್ಲ- ಕಲ್ಲಗಂಡಿ ಎಂಬಲ್ಲಿನ ತೋಡಿನಲ್ಲಿ ಕೊಳ್ತಿಗೆ ಗ್ರಾಮದ ಬಾಯಂಬಾಡಿ ನಿವಾಸಿ ಶಿವರಾಮ ಮಣಿಯಾಣಿ(38) ಎಂಬುವರ ಮೃತದೇಹ ಬುಧವಾರ ಪತ್ತೆಯಾಗಿದೆ. ಶಿವರಾಮ ಅವರು ಬಾಯಂಬಾಡಿಯಲ್ಲಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ವಿಪರೀತ ಮಳೆ ಸುರಿದ ಪರಿಣಾಮ ನೀರಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಲ್ಲಗಂಡಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.