ಯುವಕನ ಮೃತದೇಹ ಪತ್ತೆ

dead-body-inside-suitcase
Published on

ಕಾಸರಗೋಡು: ಕುಂಬಳೆ ಪೆರುವಾಡ್ ಸಮೀಪ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿದ್ದ ಪೆರುವಾಡ್ ಕಡಪ್ಪುರ ಫಿಶರೀಸ್ ಕಾಲನಿ ನಿವಾಸಿ, ಫಾತಿಮಾ ಎಂಬುವರ ಪುತ್ರ ಆರ್ಷದ್(19)ಮೃತದೇಹ ಕುಂಬಳೆ ಅಳಿವೆಯಲ್ಲಿ ಪತ್ತೆಯಾಗಿದೆ. ಮಂಗಳವಾರ ಸಂಜೆ ಮೀನು ಹಿಡಿಯಲು ತೆರಳಿದ್ದ ಆರ್ಷದ್ ಬೃಹತ್ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು. ಅಗ್ನಿಶಾಮಕ ದಳ, ಕರಾವಳಿ ಪೊಲೀಸ್, ಸ್ಥಳೀಯ ಪೊಲೀಸರು ಹಾಗೂ ಸಾರ್ವಜನಿಕರು ಹುಡುಕಾಟ ನಡೆಸುವಾಗ ಮೀನುಗಾರರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net